ಹುಬ್ಬಳ್ಳಿ: ಕಮರಿಪೇಟೆಯಲ್ಲಿ ಈಚೆಗೆ ಚಾಕು ಇರಿತದಿಂದ ಮೃತಪಟ್ಟ ಬಾಲಕ ಚೇತನ ಅವರ ಮನೆಗೆ ಶನಿವಾರ ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ, ಸಾಂತ್ವನ ಹೇಳಿದರು.

ಮನೆಯ ಸದಸ್ಯರಿಗೆ ಧೈರ್ಯ ಹೇಳಿದ ಶಾಸಕರು, ವೈಯಕ್ತಿಕವಾಗಿ ₹50 ಸಾವಿರ ನೆರವು ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಧುನಿಕ ಜಗತ್ತಿಗೆ ಮಾರು ಹೋಗಿರುವ ಯುವ ಪೀಳಿಗೆ ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಸಿನೆಮಾ, ಸಾಮಾಜಿಕ ಜಾಲತಾಣ, ಕಾನೂನು ಬಾಹಿರ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ ಮಕ್ಕಳು, ಯುವಕರು ಅಪರಾಧಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದು ಬದಲಾಗಬೇಕಾದರೆ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯ ಆಗಬೇಕಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರದ ಸಹಕಾರ ಸದಾ ಇದೆ’ ಎಂದರು.

ಮುಖಂಡರಾದ ಗುರುನಾಥ ಉಳ್ಳಿಕಾಶಿ, ಮೋಹನ್ ಅಸುಂಡಿ, ಕುಮಾರ ಕುಂದನಹಳ್ಳಿ, ಮಂಜುನಾಥ ಕಠಾರೆ, ಅರ್ಜುನ ಪಾಟೀಲ, ಯುಲ್ಲಪ್ಪ ಮೆಹರವಾಡೆ, ಮುಸ್ತಾಕ್ ಮುದಗಲ್, ಪ್ರೇಮನಾಥ ಚಿಕ್ಕತುಂಬಳ, ನಾಸಿರ್ ಅಸುಂಡಿ, ಅಕ್ಬರ್ ಅಂಗಡಿ, ಸಂತೋಷ ಪೂಜಾರಿ, ರಿಹಾನ್ ಐನಾಪುರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.