ಶುಕ್ರವಾರ, ಜನವರಿ 22, 2021
28 °C

ರೋಲ್‌ಕಾಲ್‌ ಹೋರಾಟಗಾರರಿಂದ ಬಂದ್‌: ಶಾಸಕ ಅರವಿಂದ ಬೆಲ್ಲದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಕರ್ನಾಟಕ ಬಂದ್‌ ಮಾಡಲು ಡಿ.5 ರಂದು ಕರೆ ನೀಡಿರುವವರು ರೋಲ್‌ಕಾಲ್‌ ಹೋರಾಟಗಾರರು. ಕನ್ನಡದ ಹೆಸರಿನಲ್ಲಿ ವಸೂಲಿ ದಂಧೆ ಮಾಡುತ್ತಾರೆ’ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ಕೊರೊನಾ ಸೋಂಕು ಜನರ ಆರೋಗ್ಯದ ಮೇಲೆ ಮಾಡುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ‘ಆರೋಗ್ಯ ಬಂಧು’ ಆ್ಯಪ್‌ ಅನ್ನು ಮಂಗಳವಾರ ನಗರದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಯಾವುದೇ ರೀತಿಯಲ್ಲಿ ಇವರು ಸುದ್ದಿಯಲ್ಲಿರಬೇಕು ಎಂದು ಬಯಸುತ್ತಾರೆ ಎಂದು ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ವಿರುದ್ಧ ಹರಿಹಾಯ್ದ ಅವರು, ಕನ್ನಡದ ಮೇಲೆ ಇವರಿಗೆ ಪ್ರೀತಿ ಇಲ್ಲ. ಪ್ರಚಾರವೇ ಅವರಿಗೆ ಮುಖ್ಯ’ ಎಂದು ಟೀಕಿಸಿದರು.

‘ಬಂದ್‌ಗೆ ಕರೆ ನೀಡಿರುವವರು ನಕಲಿ ಹೋರಾಟಗಾರರಾಗಿದ್ದಾರೆ. ಕನ್ನಡದ ಮೇಲೆ ಇವರಿಗೆ ಪ್ರೀತಿ ಇಲ್ಲ. ಹೊರಗಿನಿಂದ ಬಂದ ವ್ಯಾಪಾರಸ್ಥರು ಸೇರಿದಂತೆ ಹಲವರು ಬಳಿ ಕನ್ನಡದ ಹೆಸರಲ್ಲಿ ರೋಲ್‌ ಕಾಲ್‌ ಮಾಡುತ್ತಾರೆ’ ಎಂದು ಆರೋಪಿಸಿದರು.

‘ಮರಾಠಾ ಅಭಿವೃದ್ಧಿ ನಿಗಮ ರಚನೆಯನ್ನು ಸ್ವಾಗತಿಸುತ್ತೇನೆ. ಬೀದರ್‌ನಿಂದ ಬೆಂಗಳೂರು ವರೆಗೆ ಮರಾಠಾ ಸಮಾಜದವರು ನೆಲೆಸಿದ್ದಾರೆ. ಅವರೂ ಕನ್ನಡಿಗರೇ’ ಎಂದರು.

ಇದನ್ನೂ ಓದಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ‌ಗೆ ಕರವೇ ನಾರಾಯಣಗೌಡರ ಎರಡು ಸವಾಲು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು