ಹುಬ್ಬಳ್ಳಿ: ‘ಶಬರಿನಗರದ ಜನರ ಜಾಗದ ಸಮಸ್ಯೆಗಳನ್ನು ಪರಿಹರಿಸಿಕೊಟ್ಟ ಶಾಸಕ ಜಗದೀಶ ಶೆಟ್ಟರ್ ಅವರಿಗೆ ಮಾರ್ಚ್ 22ರಂದು ಸಂಜೆ 5 ಗಂಟೆಗೆ ಕುಸುಗಲ್ ರಸ್ತೆಯ ಶಬರಿನಗರದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಇಲ್ಲಿನ ಶಬರಿನಗರ ನಿವಾಸಿ ಶಂಕರಪ್ಪ ಸುಂಕದ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014ರಲ್ಲಿ ವ್ಯಕ್ತಿಯೊಬ್ಬರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನಮ್ಮನ್ನು ಜಾಗ ಖಾಲಿ ಮಾಡಿಸಲು ಪ್ರಯತ್ನ ನಡೆಸಿದ್ದರು. ಆಗ ಶೆಟ್ಟರ್ ಅವರು ನಮ್ಮ ಬೆನ್ನಿಗೆ ನಿಂತು ಕಾನೂನು ಹೋರಾಟ ಮಾಡಲು ಸಲಹೆ ನೀಡಿದ್ದರು’ ಎಂದರು.

‘ಆರಂಭಿಕ ಕಾನೂನು ಹೋರಾಟದಲ್ಲಿ ನಮಗೆ ಮೇಲುಗೈ ಆಗಿದ್ದರೂ, ಬೇರೆಬೇರೆ ರೀತಿಯಲ್ಲಿ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ಈಗ ಬಡಾವಣೆ ಜಾಗದ ಮೂಲ ಮಾಲೀಕರು ಮತ್ತು ಖೊಟ್ಟಿ ದಾಖಲೆ ಸೃಷ್ಟಿಸಿದ ವ್ಯಕ್ತಿಗಳನ್ನು ಕೂರಿಸಿ ಶೆಟ್ಟರ್ ಅವರು ನಮ್ಮೊಂದಿಗೆ ರಾಜಿ ಮಾಡಿಸಿದ್ದಾರೆ’ ಎಂದು ತಿಳಿಸಿದರು.

‘ಶೆಟ್ಟರ್ ಅವರ ಪ್ರಯತ್ನದಿಂದಾಗಿ ಶಬರಿನಗರದಲ್ಲಿ ವಾಸ ಮಾಡುತ್ತಿದ್ದ 196 ಕುಟುಂಬಗಳು ಈಗ ಜಾಗದ ಮಾಲೀಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಮೋಹನ ಗುರುಸ್ವಾಮಿ ಭಾಗಿಯಾಗಲಿದ್ದಾರೆ’ ಎಂದರು.

ಎಸ್.ಎಸ್. ಪಾಷಾ, ಪರಶುರಾಮ ರಾಯಚೂರು, ಪ್ರಶಾಂತ ಭೂಷಣ್ಣವರ, ಖಲೀಲುಲ್ಲಾ ಪಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.