ಶನಿವಾರ, ಅಕ್ಟೋಬರ್ 16, 2021
23 °C

ದಸರಾ: ಹೆಚ್ಚುವರಿ ಬೋಗಿಗಳ ಜೋಡಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದಸರಾ ಹಬ್ಬದ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಲಯವು ಹಲವು ರೈಲುಗಳಿಗೆ ಹೆಚ್ಚುವರಿಯಾಗಿ ಎರಡು ಬೋಗಿಗಳನ್ನು ಜೋಡಿಸುತ್ತಿದೆ.

ಮೈಸೂರು–ಹುಬ್ಬಳ್ಳಿ (ರೈಲು ಸಂಖ್ಯೆ 06582), ಮೈಸೂರು–ಸೊಲ್ಲಾಪುರ (06535), ಮೈಸೂರು–ಶಿವಮೊಗ್ಗ (06227) ಹಾಗೂ ಬೆಂಗಳೂರು–ಹುಬ್ಬಳ್ಳಿ (06241) ರೈಲುಗಳಿಗೆ ಅ.13 ಹಾಗೂ 14 ರಂದು ಹೆಚ್ಚುವರಿ ಬೋಗಿಗಳಿರಲಿವೆ.

ಹುಬ್ಬಳ್ಳಿ–ಮೈಸೂರು (96581), ಹುಬ್ಬಳ್ಳಿ–ಬೆಂಗಳೂರು (06242) ಅ.17 ರಂದು, ಬೆಂಗಳೂರು–ಮೀರಜ್‌ (06589), ಬೆಂಗಳೂರು–ಬೆಳಗಾವಿ (06549) ಅ.13 ರಿಂದ 16ರವರೆಗೆ, ಮೀರಜ್‌–ಬೆಂಗಳೂರು (06590), ಬೆಳಗಾವಿ–ಬೆಂಗಳೂರು (06550) ಅ.14 ರಿಂದ 17ರವರೆಗೆ, ಬೆಂಗಳೂರು–ಹುಬ್ಬಳ್ಳಿ (02079), ಹುಬ್ಬಳ್ಳಿ–ಬೆಂಗಳೂರು (02080) ಅ.13 ರಿಂದ 17ರವರೆಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು