ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ವಿನೋದ ಅಸೂಟಿ ನಾಮಪತ್ರ ಸಲ್ಲಿಕೆ ಏ.16 ರಂದು

Published 15 ಏಪ್ರಿಲ್ 2024, 15:33 IST
Last Updated 15 ಏಪ್ರಿಲ್ 2024, 15:33 IST
ಅಕ್ಷರ ಗಾತ್ರ

ನವಲಗುಂದ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಅವರು ಏ.16 ರಂದು ನಾಮಪತ್ರ ಸಲ್ಲಿಸಲಿದ್ದು, ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದ ಅವರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಧಾರವಾಡದ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸದುಗೌಡ ಪಾಟೀಲ, ಶಾಂತವ್ವ ಗುಜ್ಜಳ, ಚಂಬಣ್ಣ ಹಾಳದೋಟರ, ನಂದಿನಿ ಹಾದಿಮನಿ, ಉಸ್ಮಾನ ಬಬರ್ಚಿ, ಮಾಂತೇಶ ಭೋವಿ, ಪದ್ಮಾವತಿ ಪೂಜಾರ, ಪುರಸಭೆ ಸದಸ್ಯರುಗಳಾದ ಜೀವನ ಪವಾರ, ಮೋದಿನ ಶಿರೂರ, ಮಂಜುನಾಥ ಜಾಧವ, ಶಿವಾನಂದ ತಡದಿ, ಸುರೇಶ ಮೇಟಿ, ಹುಸೇನಬಿ ಧಾರವಾಡ, ಅನ್ನಪೂರ್ಣ ಸುಣಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT