ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್, ರಂಜಿತ್, ಶಾಹಿನ್, ಕಮಲಾ ಪ್ರಥಮ

ಬಿವಿಬಿ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿ ಮ್ಯಾರಥಾನ್
Last Updated 23 ಜನವರಿ 2023, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕೆಎಲ್‍ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ, ‘ನಮ್ಮ ನಡೆ ಭವ್ಯ ಭಾರತದ ಕಡೆಗೆ’ ಧ್ಯೇಯ ವಾಕ್ಯದೊಂದಿಗೆ ಭಾನುವಾರ ಆಯೋಜಿಸಿದ್ದ, ‘ಹುಬ್ಬಳ್ಳಿ ಮ್ಯಾರಥಾನ್– 2023’ರ ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡವರಿಗೆ ನಗದು ಬಹುಮಾನ ವಿತರಿಸಲಾಯಿತು.

14 ವರ್ಷದೊಳಗಿನ ಬಾಲಕರ ವಿಭಾಗ (6 ಕಿ.ಮೀ.): ವೇದಾಂತ (ಪ್ರಥಮ), ನಿಂಗಬಸಪ್ಪ ಗಾಣಿಗೇರ (ದ್ವಿತೀಯ), ಸುಧಾಂಶು ಕ್ಷೀರಸಾಗರ (ತೃತೀಯ). ಬಾಲಕಿಯರ ವಿಭಾಗ: ಶ್ವೇತಾ ಬಡಿಗೇರ (ಪ್ರಥಮ), ಶ್ರೇಯಾ ಕಾಳೆ (ದ್ವಿತೀಯ), ಎಂ.ಎಸ್. ಸನ್ನಿ (ತೃತೀಯ).

15-49 ವಯೋಮಾನದ ಪುರುಷ ವಿಭಾಗ (14 ಕಿ.ಮೀ): ನವೀನ ಎಸ್., (ಪ್ರಥಮ), ಬಹುಬನ್ ಶಿಂಧೆ (ದ್ವಿತೀಯ), ಸುನೀಲ ಎನ್., (ತೃತೀಯ). ಮಹಿಳಾ ವಿಭಾಗ: ಶಾಹಿನ್ ಕೆ.(ಪ್ರಥಮ), ಪ್ರಿಯಾ ಬಾಗೇವಾಡಿ (ದ್ವಿತೀಯ).

50 ವರ್ಷ ಮೇಲ್ಪಟ್ಟವರ ವಿಭಾಗ (14 ಕಿ.ಮೀ): ರಂಜಿತ್ ಕೆ., (ಪ್ರಥಮ), ಕಲ್ಲಪ್ಪ ಟಿ., (ದ್ವಿತೀಯ), ಎಲ್. ನಾರಾಯಣ (ತೃತೀಯ). ಮಹಿಳಾ ವಿಭಾಗ: ಕಮಲಾ ಹೆಗಡೆ (ಪ್ರಥಮ), ಭವಾನಿ ಭಂಡಾರಿ (ದ್ವಿತೀಯ), ಅನಸೂಯಾ ಕೆ., (ತೃತೀಯ).

ವಿಶೇಷ ವಿಭಾಗ (6 ಕಿ.ಮೀ.): ಪ್ರವೀಣ ಎಸ್.ಬಿ., ಹಾಗೂ ಶಿವಲಿಂಗಮ್ಮ ಕುರುವತ್ತಿಮಠ.

14 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಬಹುಮಾನ ₹5 ಸಾವಿರ, ದ್ವಿತೀಯ ₹3 ಸಾವಿರ ಹಾಗೂ ತೃತೀಯ ₹2 ಸಾವಿರ, 15– 49 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ₹10 ಸಾವಿರ, ದ್ವಿತೀಯ ₹5 ಸಾವಿರ, ತೃತೀಯ ₹3 ಸಾವಿರ, 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ₹10 ಸಾವಿರ, ದ್ವಿತೀಯ ₹5 ಸಾವಿರ, ತೃತೀಯ ₹3 ಸಾವಿರ ಹಾಗೂ ವಿಶೇಷ ವಿಭಾಗದಲ್ಲಿ ಸಮಾನ ಸ್ಥಾನ ಪಡೆದ ಇಬ್ಬರಿಗೆ ತಲಾ ₹5 ಸಾವಿರ ವಿತರಿಸಲಾಯಿತು.

ಕಾಲೇಜಿನ ಪ್ರವೇಶದ್ವಾರದಿಂದ ಆರಂಭಗೊಂಡ ಮ್ಯಾರಥಾನ್‌ಗೆ ಶಾಸಕ‌ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಕಿಮ್ಸ್ ಮಾರ್ಗವಾಗಿ ಹೊರಟ ಮ್ಯಾರಥಾನ್ ಹೊಸೂರು, ಕೇಶ್ವಾಪುರ, ರೈಲು ನಿಲ್ದಾಣ, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ಅಕ್ಷಯ ಪಾರ್ಕ್, ತೋಳನಕೆರೆ, ಶಿರೂರು ಪಾರ್ಕ್ ಮೂಲಕ ಕಾಲೇಜು‌ ಪ್ರವೇಶದ್ವಾರ ತಲುಪಿತು. ವಿದ್ಯಾರ್ಥಿಗಳು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.

ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್, ವೀರೇಶ ಸಂಗಳದ, ಬಿ.ಎಲ್. ದೇಸಾಯಿ, ಪಿ.ಜಿ. ತೆವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT