ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಶಿಕ್ಷಣ ನೀತಿ: ಬದಲಾವಣೆಗೆ ಅವಕಾಶ

ವಿಧಾನ ಪರಿಷತ್‌ ಸದಸ್ಯ ತಳವಾರ ಸಾಬಣ್ಣ ಅಭಿಮತ
Last Updated 5 ಸೆಪ್ಟೆಂಬರ್ 2021, 15:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅರ್ಥಶಾಸ್ತ್ರದ ಆಳಅಗಲ ತಿಳಿಯದೆ ಕೆಲವು ವಿದ್ಯಾರ್ಥಿಗಳು ಅರ್ಥಶಾಸ್ತ್ರ ಪದವಿ ಪಡೆಯುತ್ತಿದ್ದಾರೆ. ಅರ್ಥಶಾಸ್ತ್ರ ಪದವಿಗೆ ವಿಫುಲ ಅವಕಾಶಗಳಿದ್ದರೂ ನಿರ್ದಿಷ್ಟ ಯೋಜನೆ ರೂಪಿಸಿಕೊಳ್ಳದ ಕಾರಣ ಹಿನ್ನೆಡೆಯಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ತಳವಾರ ಸಾಬಣ್ಣ ಅಭಿಪ್ರಾಯಪಟ್ಟರು.

ಎಸ್‌ಜೆಎಂವಿಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ –2020 ಅರ್ಥಶಾಸ್ತ್ರ ಪಠ್ಯಕ್ರಮದ ಪುನರ್‌ರಚನೆ’ ಕಾರ್ಯಾಗಾರ ಮತ್ತು ಶಿಕ್ಷಕರ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅರ್ಥಶಾಸ್ತ್ರ ಓದಿದವರಿಗೆ ಹೇರಳ ಅವಕಾಶಗಳಿವೆ. ಸಕಾಲದಲ್ಲಿ ಬಳಸಿಕೊಳ್ಳದೆ ಇರುವುದರಿಂದ ಬೇರೆ ವಿಭಾಗಗಳು ಇದರ ಸದುಪಯೋಗ ಪಡೆದವು. ನೂತನ ಶಿಕ್ಷಣ ನೀತಿ ಅರ್ಥಶಾಸ್ತ್ರ ಕ್ಷೇತ್ರದಲ್ಲಿನ ಬದಲಾವಣೆಗೆ ಹೊಂದಿಕೊಳ್ಳುವವರಿಗೆ ಪೂರಕವಾಗಿದ್ದು, ಈ ಅವಕಾಶ ಬಳಸಿಕೊಳ್ಳಬೇಕು.’ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್‌.ಟಿ ಬಾಗಲಕೋಟಿ ಮಾತನಾಡಿ, ‘ನೂತನ ಪಠ್ಯಕ್ರಮದಲ್ಲಿ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಯೋಜನೆ ರೂಪಿಸುವುದಕ್ಕಿಂತ ಪರಿಣಾಮಕಾರಿ ಜಾರಿಗೆ ಆದ್ಯತೆ ನೀಡಬೇಕು’ ಎಂದರು.

‘ಪದವಿ ಗಳಿಸಿದರೂ ಕೌಶಲದ ಕೊರತೆಯಿಂದಾಗಿ ಸಾಕಷ್ಟು ಜನ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಹೊಸ ಶಿಕ್ಷಣ ನೀತಿಯೂ ಕಲಿಕೆ, ಮರು ಕಲಿಕೆ ಮತ್ತು ಹೊಸ ಕಲಿಕೆಯ ಪ್ರಮುಖ ಅಂಶಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ವೈ.ಎಸ್. ಹನುಮಂತರಾಯ, ಎಸ್‌ಜೆಎಂವಿ ಸಂಘದ ಅಧ್ಯಕ್ಷ ಅರವಿಂದ ಕುಬಸದ, ಗೌರವ ಕಾರ್ಯದರ್ಶಿ ಹನಮಂತ ಶಿಗ್ಗಾಂವ, ಕರ್ನಾಟಕ ಆರ್ಥಿಕ ಒಕ್ಕೂಟದ ಕಾರ್ಯದರ್ಶಿ ಕೆ.ಷಣ್ಮುಖಪ್ಪ, ಒಕ್ಕೂಟದ ಅಧ್ಯಕ್ಷ ಲಿಂಗರಾಜ ಅಂಗಡಿ, ಶಶಿಧರ ಸಾಲಿ, ಕರ್ನಾಟಕ ಆರ್ಥಿಕ ಒಕ್ಕೂಟದ ಗೌರವ ಅಧ್ಯಕ್ಷ ಎಸ್ ಬಿ ಸೋಮಣ್ಣವರ, ಸಂಘಟನಾ ಕಾರ್ಯದರ್ಶಿ ಪ್ರೊ.ಬಿ. ಬಿ. ಸುಣಗಾರ, ಪ್ರಾಚಾರ್ಯ ಡಾ. ಕೆ. ಶಾಂತಯ್ಯ, ಪ್ರೊ. ತಾಯಣ್ಯ, ಪ್ರೊ.ಶಿವಕುಮಾರ್ ಪ್ರಭಯ್ಯನವರಮಠ, ಆಯುಷ್ ಲುಕಮನ್, ಶ್ವೇತಾ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT