ಸೋಮವಾರ, ಏಪ್ರಿಲ್ 6, 2020
19 °C

ಹುಬ್ಬಳ್ಳಿ | ಮೂರುಸಾವಿರ ಮಠ ಉತ್ತರಾಧಿಕಾರಿ ಚರ್ಚೆ ಅನಗತ್ಯ: ಮೋಹನ ಲಿಂಬಿಕಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಫೆ. 23 ರಂದು ಸಭೆ ನಡೆಸಲು ಯಾರೂ ಅನುಮತಿ ಪಡೆದಿಲ್ಲ ಎಂದು ಮಠದ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠದ ಶ್ರೀಗಳು ಅಥವಾ ಮ್ಯಾನೇಜರ್ ಅವರಿಂದ ಯಾರೂ ಅನುಮತಿ ಪಡೆದಿಲ್ಲ. ಹಾಗಾಗಿ, ಅಂದು ಯಾವುದೇ ಸಭೆ ಅಲ್ಲಿ ನಡೆಯುವುದಿಲ್ಲ ಎಂದರು.

ಉತ್ತರಾಧಿಕಾರಿ ಆಯ್ಕೆಗೆ ಎರಡು ಪತ್ರಿಕೆಗಳಲ್ಲಿ ಆಯ್ಕೆ ಕುರಿತು ಪ್ರಕಟಣೆ ನೀಡಬೇಕು. ಜೊತೆಗೆ ಭಕ್ತರ ಸಭೆ ಕರೆದು ಸರ್ವಾನುಮತ ಅಥವಾ ಬಹುಮತದಿಂದ ಆಯ್ಕೆ ಮಾಡಬೇಕು. ದಿಂಗಾಲೇಶ್ವರರ ಆಯ್ಕೆಯಲ್ಲಿ ಇದ್ಯಾವುದೂ ಆಗಿಲ್ಲ ಎಂದು ಹೇಳಿದರು.

ಮಠದ‌‌‌ ಶ್ರೀಗಳ ಮುಂದೆ ಈಗ ಉತ್ತರಾಧಿಕಾರಿ ಆಯ್ಕೆ ವಿಷಯವಿಲ್ಲ. ಅವರು ಸಮರ್ಥರಾಗಿದ್ದು, ಮಠವನ್ನು ಮುಂದುವರಿಸಲಿದ್ದಾರೆ. ಉತ್ತರಾಧಿಕಾರಿ ಚರ್ಚೆ ಅನಗತ್ಯ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು