ಶನಿವಾರ, ನವೆಂಬರ್ 28, 2020
24 °C
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ

ಎಲ್ಲ 19 ಸ್ಥಾನ ಬಾಚಿಕೊಂಡ ಎಐಟಿಯುಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರ ಆಯ್ಕೆಗೆ ಗುರುವಾರ ನಗರದಲ್ಲಿ ನಡೆದ ಚುನಾವಣೆಯಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಪ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ (ಎಐಟಿಯುಸಿ) ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದೆ. 19 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ವಿಭಾಗದಲ್ಲಿಯೂ ಗೆಲುವು ಪಡೆದಿದೆ.

ಗುರುವಾರ ಸಂಜೆ ಆರಂಭವಾಗಿದ್ದ ಮತ ಎಣಿಕೆ ‌‌ಶುಕ್ರವಾರ ಬೆಳಗಿನ ಜಾವ ಮುಕ್ತಾಯಗೊಂಡಿತು. ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಈ ಪತ್ತಿನ ಸಂಘಕ್ಕೆ ಶೇ 82.99ರಷ್ಟು ಮತದಾನವಾಗಿತ್ತು. ಚುನಾವಣಾ ಕಣದಲ್ಲಿ ಎಲ್ಲ ಅಭ್ಯರ್ಥಿಗಳು ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದರಾದರೂ, ‘ಹೊರಗಡೆ’ ತಮ್ಮದೇ ತಂಡಗಳನ್ನು ಮಾಡಿಕೊಂಡಿದ್ದರು. ಹೀಗಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಎಂಎಸ್‌ ಸಂಘ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ, ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಮತ್ತು ಎಐಟಿಯುಸಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆಯ್ಕೆಯಾದ ಹೊಸ ನಿರ್ದೇಶಕರ ಅಧಿಕಾರವಧಿ ಐದು ವರ್ಷ.

ಸಾಮಾನ್ಯ ವಿಭಾಗದಲ್ಲಿ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಐಟಿಯುಸಿಯ ತಂಡದ ಎಚ್‌.ಎಸ್‌. ನಾಗನೂರ (ನರಗುಂದ ಘಟಕದಲ್ಲಿ ಚಾಲಕ/ನಿರ್ವಾಹಕ), ಎನ್‌.ಬಿ. ಭರಮಗೌಡ್ರ (ಬಿಆರ್‌ಟಿಎಸ್‌ ಘಟಕದ ಚಾಲಕ), ಎ.ಕೆ. ಜಾವೂರ (ಧಾರವಾಡ ಘಟಕದ ಚಾಲಕ ಹಾಗೂ ನಿರ್ವಾಹಕ), ಎ.ವಿ. ಇಟಗಿ (ಹಾವೇರಿ ಘಟಕದ ಚಾಲಕ), ಎಂ.ಎಸ್‌. ಕದಂ (ಧಾರವಾಡ ಘಟಕದ ಚಾಲಕ/ನಿರ್ವಾಹಕ), ಎಂ.ಎಂ. ಕಟಗೇರಿ (ರೋಣ ಘಟಕದ ಚಾಲಕ/ನಿರ್ವಾಹಕ), ವಿಶ್ವನಾಥ ಸಿ. ಹಂಚಾಟೆ (ಹುಬ್ಬಳ್ಳಿ ನಗರ ಸಾರಿಗೆ 1ನೇ ಘಟಕದ ಚಾಲಕ/ನಿರ್ವಾಹಕ), ಪರಶುರಾಮ ಬೇಡರ (ಕೊಪ್ಪಳ ಘಟಕದ ಚಾಲಕ/ನಿರ್ವಾಹಕ), ವೈ.ಡಿ. ಕಾಲವಾಡ (ಹುಬ್ಬಳ್ಳಿ ನಗರ ಸಾರಿಗೆ 1ನೇ ಘಟಕದ ಚಾಲಕ/ನಿರ್ವಾಹಕ), ಬಿ.ಎಂ. ಕೆಂದೂರ (ಗದಗ ಘಟಕದ ಚಾಲಕ), ಎಂ.ವಿ. ತೋರಗಲ್‌ (ಧಾರವಾಡ ಘಟಕದ ತಾಂತ್ರಿಕ ಸಿಬ್ಬಂದಿ), ಝಡ್‌. ಐ. ಕರ್ಜಗಿ (ರಾಣೆಬೆನ್ನೂರ ಘಟಕದ ಚಾಲಕ/ನಿರ್ವಾಹಕ) ಮತ್ತು ಇಸ್ಮಾಯಿಲ್‌ ಆರ್‌. ನಾಯ್ಕರ್‌ (ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಚಾಲಕ/ನಿರ್ವಾಹಕ) ಆಯ್ಕೆಯಾಗಿದ್ದಾರೆ.

ಮಹಿಳಾ ಮೀಸಲಾತಿಯಿಂದ ಹುಬ್ಬಳ್ಳಿಯ ಆರ್‌.ಎಸ್‌. ದುರುಗಣ್ಣವರ ಮತ್ತು ಎಸ್‌.ಎಂ. ಪತ್ತಾರ ಅವರು ಆಯ್ಕೆಯಾಗಿದ್ದಾರೆ. ದುರುಗಣ್ಣವರ ಹುಬ್ಬಳ್ಳಿ ಗ್ರಾಮಾಂತರ ಘಟಕ–2ರಲ್ಲಿ ನಿರ್ವಾಹಕಿಯಾಗಿ, ಎಸ್‌.ಎಂ. ಪತ್ತಾರ ವಿಭಾಗೀಯ ಕಾರ್ಯಾಗಾರದಲ್ಲಿ ತಾಂತ್ರಿಕ ಸಿಬ್ಬಂದಿಯಾಗಿದ್ದಾರೆ.

ಹಿಂದುಳಿದ ‘ಅ’ ಪ್ರವರ್ಗದ ಮೀಸಲಾತಿಯಲ್ಲಿ ಎಂ.ಕೆ. ಅಮರಗೋಳ (ಹುಬ್ಬಳ್ಳಿ ಗ್ರಾಮಾಂತರ 2ನೇ ಘಟಕದ ಚಾಲಕ/ನಿರ್ವಾಹಕ), ಹಿಂದುಳಿದ ‘ಬ’ ಪ್ರವರ್ಗದಲ್ಲಿ ‌ಎನ್‌.ವಿ. ಮುಧೋಳ (ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಚಾಲಕ), ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಜಿ.ಸಿ. ಕಮಲದಿನ್ನಿ (ಹುಬ್ಬಳ್ಳಿ ನಗರ ಸಾರಿಗೆ, 1ನೇ ಘಟಕದ ನಿರ್ವಾಹಕ) ಮತ್ತು ಪರಿಶಿಷ್ಟ ಪಂಗಡದಲ್ಲಿ ಮಂಜುನಾಥ ಎಂ. ನಾಯ್ಕರ (ಕೆಎಸ್‌ಆರ್‌ಟಿಸಿ ಕ್ವಾಟ್ರರ್ಸ್‌ ಹೊಸೂರು) ಆಯ್ಕೆಯಾದರು ಎಂದು ಚುನಾವಣಾಧಿಕಾರಿಯೂ ಆದ ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು