ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಕೈಕ ರೈಲ್ವೆ ವಸ್ತು ಸಂಗ್ರಹಾಲಯ ಆರಂಭವಾಗಿ ಮೂರು ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ 24,357 ಜನ ಭೇಟಿ ನೀಡಿದ್ದಾರೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

186 ವರ್ಷಗಳ ಇತಿಹಾಸ ಹೊಂದಿರುವ ರೈಲ್ವೆ ಕಾಲಕ್ರಮೇಣ ಕಂಡ ಬದಲಾವಣೆಗಳು, ಬಂದ ಹೊಸತನಗಳ ಬಗ್ಗೆ ವಸ್ತು ಸಂಗ್ರಹಾಲಯದಲ್ಲಿ ಮಾಹಿತಿ ದಾಖಲಿಸಲಾಗಿದೆ. ಹಲವು ಅಪರೂಪದ ವಸ್ತುಗಳಿವೆ. ಆಗಸ್ಟ್‌ನಲ್ಲಿ 2,683 ಜನ ವೀಕ್ಷಿಸಿದ್ದರು. ಇದುವರೆಗೆ ಭೇಟಿ ನೀಡಿದವರಲ್ಲಿ ಸುಮಾರು ಐದು ಸಾವಿರ ಜನ ಮಕ್ಕಳೇ ಇರುವುದು ವಿಶೇಷ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿತ್ಯ 140ರಿಂದ 150 ಜನ ವಸ್ತು ಸಂಗ್ರಹಾಲಯಕ್ಕೆ ಬರುತ್ತಿದ್ದು, ವಾರಾಂತ್ಯದಲ್ಲಿ ದಿನವೊಂದಕ್ಕೆ 400 ಜನ ಬರುತ್ತಿದ್ದಾರೆ. ಆಗಸ್ಟ್‌ನಲ್ಲಿ 2,683 ಜನ ಭೇಟಿ ನೀಡಿದ್ದು, 1,373 ಜನ ಸಣ್ಣ ರೈಲಿನಲ್ಲಿ ಸಂಚರಿಸಿದ್ದಾರೆ. ನವೆಂಬರ್‌ನಲ್ಲಿ 6,628 ಜನ ಭೇಟಿ ನೀಡಿದ್ದಾರೆ. ಈ ವಸ್ತು ಸಂಗ್ರಹಾಲಯ ಮಧ್ಯಾಹ್ನ 12ರಿಂದ ಸಂಜೆ 7 ಗಂಟೆ ತನಕ, ವಾರಾಂತ್ಯದಲ್ಲಿ ಮ. 12ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ. 12 ವರ್ಷದ ಒಳಗಿನ ಮಕ್ಕಳಿಗೆ ₹20 ಮತ್ತು ಐದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ. ಪ್ರತಿ ಸೋಮವಾರ ರಜೆ.

ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಪ್ರತಿಕ್ರಿಯಿಸಿ ‘ರೈಲ್ವೆ ವಸ್ತು ಸಂಗ್ರಹಾಲಯ ಹುಬ್ಬಳ್ಳಿ–ಧಾರವಾಡದ ಪ್ರವಾಸಿ ಕೇಂದ್ರವಾಗಿ ಬದಲಾಗಿದೆ. ಶಾಲೆಗಳು ಪುನರಾರಂಭವಾದ ಬಳಿಕ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.