ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ‘ಒಂದು ಸರಳ ಪ್ರೇಮಕಥೆ’ ಫೆ.8ಕ್ಕೆ ತೆರೆಗೆ

Published 28 ಜನವರಿ 2024, 6:18 IST
Last Updated 28 ಜನವರಿ 2024, 6:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಪ್ರಚಾರದ ಪ್ರಯುಕ್ತ ಚಿತ್ರತಂಡವು ನಗರದ ಬಿವಿಬಿ ಕಾಲೇಜಿಗೆ ಬುಧವಾರ ಭೇಟಿ ನೀಡಿತು. 

ಚಿತ್ರದ ನಾಯಕ ನಟ ವಿನಯ್‌ ರಾಜ್‌ಕುಮಾರ್ ಮಾತನಾಡಿ,  ‘ನಮ್ಮ ಸಿನಿಮಾ ಫೆ.8ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಪ್ರೀತಿ, ಹಾಸ್ಯದೊಂದಿಗೆ ಕೌಟುಂಬಿಕ ಚಿತ್ರವಾಗಿದೆ. ಒಟ್ಟು 10 ಹಾಡುಗಳಿದ್ದು, ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಜನಪ್ರಿಯವಾಗಿವೆ. ಕುಟುಂಬದೊಂದಿಗೆ ತೆರಳಿ ಚಿತ್ರ ವೀಕ್ಷಿಸಬಹುದು’ ಎಂದು ಹೇಳಿದರು.

‘ಹೆಚ್ಚು ಚಿಂತೆ ಮಾಡಿದರೆ ಜೀವನ ವಿರಳವಾಗುತ್ತದೆ. ಚಿಂತೆ ಕಡಿಮೆ ಮಾಡಿದರೆ ಜೀವನ ಸರಳವಾಗುತ್ತದೆ. ಈ ಸಂದೇಶ ಚಿತ್ರದಲ್ಲಿದೆ’ ಎಂದರು.

ವಿದ್ಯಾರ್ಥಿಗಳು ವಿನಯ್‌ ರಾಜ್‌ಕುಮಾರ್‌ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ನಿರ್ದೇಶಕ ಸುನಿ, ನಿರ್ಮಾಪಕ ರಮೇಶ, ಬಿವಿಬಿ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಘಟಕದ ಡೀನ್ ಸಂಜಯ ಕೊಟಬಾಗಿ,  ಶಿವಾನಂದ ಮುತ್ತಣ್ಣನವರ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT