ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ, ಪತ್ನಿ ವೇತನವೇ ಆದಾಯ

Last Updated 6 ಅಕ್ಟೋಬರ್ 2020, 15:58 IST
ಅಕ್ಷರ ಗಾತ್ರ

ಧಾರವಾಡ: ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಆದಾಯ ಮೂಲ ನಿವೃತ್ತಿ ವೇತನ ಹಾಗೂ ಪತ್ನಿಯ ವೇತನವೇ ಆಗಿದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಶಿಕ್ಷಕರಾಗಿ ನಿವೃತ್ತರಾಗಿರುವ ಅವರು ತಮ್ಮ ಬಳಿ ₹45 ಸಾವಿರ ಹಾಗೂ ಪತ್ನಿ ಬಳಿ ₹41 ಸಾವಿರ ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ ಗುರಿಕಾರ ಬಳಿ ₹2.68 ಲಕ್ಷ ಹಾಗೂ ಅವರ ಪತ್ನಿ ಬಳಿ ₹1.82 ಲಕ್ಷ ಹೊಂದಿದ್ದಾರೆ. ಅಂಚೆ ಇಲಾಖೆಯಲ್ಲಿ ₹4 ಲಕ್ಷ ಠೇವಣಿ ಹೊಂದಿದ್ದಾರೆ.

ಗುರಿಕಾರ ಅವರು ₹15 ಲಕ್ಷ ಸಾಲ ನೀಡಿದ್ದಾರೆ. ಹಾಗೆಯೇ ಅವರ ಪತ್ನಿ ₹3 ಲಕ್ಷ ಸಾಲ ನೀಡಿದ್ದಾರೆ. ಇವರು ₹20 ಸಾವಿರ ಮೌಲ್ಯದ ಹೀರೊ ಹೊಂಡಾ ಬೈಕ್‌ ಹೊಂದಿದ್ದಾರೆ. ಗಧೆ, ಕಿರೀಟ, ಪೂಜಾ ಸಾಮಗ್ರಿ ಸೇರಿ ಗುರಿಕಾರ ಅವರ ಬಳಿ ಒಂದು ಕೆ.ಜಿ.ಬೆಳ್ಳಿ ಸಾಮಗ್ರಿ ಇದೆ. ಜತೆಗೆ 5 ಗ್ರಾಂ ಬಂಗಾರದ ಉಂಗುರವಿದೆ. ಪತ್ನಿ ಬಳಿ 12 ತೊಲೆ ಬಂಗಾರ ಹಾಗೂ 500 ಗ್ರಾಂ ಬೆಳ್ಳಿ ಸಾಮಗ್ರಿಗಳು ಇವೆ.

ಧಾರವಾಡದ ವಿಜಯನಗರದಲ್ಲಿ ಮನೆ ಹಾಗೂ ಕುಂಬಾರಕೊಪ್ಪದಲ್ಲಿ ನಿವೇಶನವನ್ನು ಗುರಿಕಾರ ಅವರು ಹೊಂದಿದ್ದಾರೆ. ಹೀಗಾಗಿ ಗುರಿಕಾರ ಅವರ ಒಟ್ಟು ಆಸ್ತಿ ಮೌಲ್ಯ ₹38.38 ಲಕ್ಷ ಹಾಗೂ ಅವರ ಪತ್ನಿ ಬಳಿ ₹11 ಲಕ್ಷ ಆಸ್ತಿ ಹೊಂದಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT