ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿರುವೆ: ಪ್ರಲ್ಹಾದ ಜೋಶಿ

Published 5 ಮೇ 2024, 16:20 IST
Last Updated 5 ಮೇ 2024, 16:20 IST
ಅಕ್ಷರ ಗಾತ್ರ

ಕಲಘಟಗಿ: ‘ಪ್ರಧಾನಿ ಮೋದಿ ಅವರಿಗೆ ಬೈದರೆ ತಾವು ದೊಡ್ಡವರು ಆಗುತ್ತೇವೆ ಎಂದು ಸಚಿವ ಲಾಡ್ ಅಂದುಕೊಂಡಿದ್ದಾರೆ. ಆದರೆ ಆಕಾಶಕ್ಕೆ ಉಗುಳಿದರೆ ನಮ್ಮ ಮೇಲೆ ಸಿಡಿಯುತ್ತದೆ ಎಂಬ ಅರಿವು ಅವರಿಗಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲಾಡ್ ವಿರುದ್ದ ಕಿಡಿಕಾರಿದರು.

ತಾಲ್ಲೂಕಿನ ಮಿಶ್ರಿಕೋಟಿ ಹಾಗೂ ಕಲಘಟಗಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ರೋಡ್ ಶೋ ಮೂಲಕ ಮತಯಾಚನೆ ಮಾಡಿ ನಂತರ ಆಂಜನೇಯ ವೃತ್ತದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜನರಿಗಾಗಿ ಪ್ರಧಾನಿ ಮೋದಿಯವರು ಆಯುಷ್ಮಾನ ಭಾರತ, ಪಿಎಂ ಕಿಸಾನ್, ಪಿಎಂ ಆವಾಸ್, ಮುದ್ರಾ, ಉಜ್ವಲ , ವಿಶ್ವಕರ್ಮದಂತಹ ಹಲವಾರು ಯೋಜನೆಗಳನ್ನು ತಂದು ಮುನ್ನಡೆಸಿದ್ದಾರೆ ಎಂದರು. 

‘ನಾನು ಕೂಡಾ ನೂರಾರು ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶಾಲೆ ಕೊಠಡಿಗಳ ನಿರ್ಮಾಣ, ರಸ್ತೆ ಅಭಿವೃದ್ಧಿ ಇನ್ನು ಹಲವು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ನಾಗರಾಜ ಛಬ್ಬಿ ,ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಶಿಧರ್ ನಿಂಬಣ್ಣವರ, ಈರಣ್ಣ ಜಡಿ, ಮಹಾಂತೇಶ ತಹಶೀಲ್ದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT