ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ರೋಟರಿ ಕ್ಲಬ್ ಧಾರವಾಡ

Last Updated 31 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಕುಟುಂಬಗಳಿಗೆ ಆಹಾರ ಸಿಗದ ಪರಿಸ್ಥಿತಿ ಇತ್ತು. ಜತೆಗೆ ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸುವ ಜವಾಬ್ದಾರಿ. ಈ ಎರಡನ್ನೂ ಸಮುದಾಯದ ನೆರವಿ
ನಿಂದಲೇ ಉತ್ತಮವಾಗಿ ನಿಭಾಯಿಸುವಲ್ಲಿ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್‌ನ ಎಲ್ಲಾ ಸದಸ್ಯರು ತಂಡವಾಗಿ ಕಾರ್ಯ ನಿರ್ವಹಿಸಿದರು.

ಅಮೆರಿಕದ ರೋಟರಿ ಕ್ಲಬ್‌ನ ನೆರವು, ರವಿ ಭೂಪಳಾಪುರ ಅವರ ವೈಯಕ್ತಿಯ ದಾನ, ಕೆವಿಜಿ ಬ್ಯಾಂಕ್ ಹಾಗೂ ಬೆಂಗಳೂರಿನ ಲಾಜಿಸ್ಟೆಮೊ ಕಂಪನಿಯ ನೆರವಿನಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಿತ ಐಸಿಯು ನಿರ್ಮಾಣದಲ್ಲಿ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಪ್ರಮುಖ ಪಾತ್ರ ವಹಿಸಿತು. ₹50ಲಕ್ಷ ಮೌಲ್ಯದ ವಸ್ತುಗಳನ್ನು ಹಂಚಲಾಗಿದೆ.

ಜಿಲ್ಲಾಡಳಿತ ರಚಿಸಿದ ಕೋವಿಡ್ ವಾರಿಯರ್ಸ್ ತಂಡದಲ್ಲಿ ನಮ್ಮ ಕ್ಲಬ್‌ ಮೂಲಕ ಅಗತ್ಯ ಇರುವವರಿಗೆ ಆಹಾರ ಕಿಟ್‌ಗಳು, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್‌, ವೈದ್ಯಕೀಯ ಉಪಕರಣಗಳು ಹೀಗೆ ಹಲವು ರೀತಿಯಲ್ಲಿ ಕೆಲಸ ಮಾಡಲಾಯಿತು. ಕೊಳಚೆ ಪ್ರದೇಶ, ಅಲೆಮಾರಿ ಕುಟುಂಬ ಹೀಗೆ ಅಗತ್ಯ ಇರುವವರಿಗೆ ಕೋವಿಡ್ ಸುರಕ್ಷತೆ ನಿಟ್ಟಿನಲ್ಲಿ ಮಾಹಿತಿ, ಸಂವಹನ ಹಾಗೂ ಶಿಕ್ಷಣದ ಮೂಲಕ ಕ್ಲಬ್ ನೆರವಾಯಿತು.

ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ವತಿಯಿಂದ ದವಸ ಧಾನ್ಯ ವಿತರಣೆ
ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ವತಿಯಿಂದ ದವಸ ಧಾನ್ಯ ವಿತರಣೆ

ಕ್ಲಬ್‌ನ ಸಹಾಯಕ ಅಧ್ಯಕ್ಷ ಕಿರಣ್ ಹಿರೇಮಠ ಹಾಗೂ ತಂಡದ ನೆರವಿನಲ್ಲಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸಂತೃಪ್ತಿ ತಂದಿದೆ. ಹಾಲಿ ಅಧ್ಯಕ್ಷ ಆನಂದ ನಾಯಕ್ ಅವರ ನೇತೃತ್ವದಲ್ಲಿ ₹25ಲಕ್ಷದಲ್ಲಿ ಬರುವ ಜನವರಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ಮತ್ತಷ್ಟು ವೈದ್ಯಕೀಯ ಉಪಕರಣಗಳನ್ನು ನೀಡುವ ಯೋಜನೆ ಇದೆ.

– ಡಾ. ಕವನ ದೇಶಪಾಂಡೆ, ಮಾಜಿ ಅಧ್ಯಕ್ಷ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT