ಹುಬ್ಬಳ್ಳಿ: ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಮತ್ತು ಗದಗ ಜಿಲ್ಲೆಯ ವಿವಿಧೆಡೆ ಶನಿವಾರ ಮಳೆ ಸುರಿಯಿತು. ಬಹುತೇಕ ಕಡೆ ತುಂತುರು ಮಳೆಯಾಯಿತು.
ಹುಬ್ಬಳ್ಳಿ – ಧಾರವಾಡ ಅಲ್ಲದೆ ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಧಾರಾಕಾರ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ, ಹೊನ್ನಾವರ, ಶಿರಸಿ ಭಾಗದಲ್ಲಿ ಬಿರುಸಿನ ವರ್ಷಧಾರೆಯಾಯಿತು.
ವಿಜಯಪುರ ಜಿಲ್ಲೆಯ ಇಂಡಿ, ಕೊಲ್ಹಾರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯಿತು. ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ, ಹುನಗುಂದದಲ್ಲಿ ಬಿರುಸಿನ ಮಳೆಯಾದರೆ, ಗದಗ ಜಿಲ್ಲೆಯ ಬಹುತೇಕ ಕಡೆ ತುಂತುರು ಮಳೆಯಾಯಿತು.
ಕಲಬುರಗಿ ವರದಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಾಗೂ ಬೀದರ್ ಜಿಲ್ಲೆಯಲ್ಲಿ ಶನಿವಾರ ಕೆಲ ಕಾಲ ಬಿರುಸಿನ ಮಳೆಯಾಯಿತು.
ಕಲಬುರಗಿಯಲ್ಲಿ ಬೆಳಗಿನ ಜಾವ ಸುಮಾರು ಒಂದು ಗಂಟೆ ಹಾಗೂ ಸಂಜೆ ಸುಮಾರು ಅರ್ಧ ಗಂಟೆ ಸುರಿಯಿತು.
ಬೀದರ್ ನಗರದಲ್ಲಿ ಸಂಜೆ ಅರ್ಧಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆಯಾಗಿದೆ. ಹುಲಸೂರ, ಔರಾದ್ ತಾಲ್ಲೂಕಿನಲ್ಲೂ ವರ್ಷಧಾರೆಯಾಗಿದೆ.