ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ರಾಮಾಯಣ ನೃತ್ಯ ರೂಪಕ

Last Updated 17 ಏಪ್ರಿಲ್ 2022, 15:06 IST
ಅಕ್ಷರ ಗಾತ್ರ

ಅಳ್ನಾವರ: ನೆಸ್ಟ್ ಕ್ರಿಯೇಷನ್‌ ಫೌಂಡೇಷನ್‌ಇಲ್ಲಿನ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಹಸಿರು ಪರಿಸರದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡ ಬೇಸಿಗೆ ಶಿಬಿರದ ಮುಕ್ತಾಯ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಪ್ರದರ್ಶಿಸಿದ ರಾಮಾಯಣದ ನೃತ್ಯ ರೂಪಕ ಗಮನ ಸೆಳೆಯಿತು.

ಪ್ರವೀಣ ಪಟ್ಯಾಳ ನಿರ್ದೇಶನ ಮಾಡಿ ನೃತ್ಯ ಸಂಯೋಜನೆ ಮಾಡಿದ್ದರು. ರಾಮನ ನೆನೆಯುತ್ತಾ ನೃತ್ಯ ಮಾಡಿದ ತಂಡ ಇಂಪಾದ ಹಾಡಿಗೆ ಹೆಜ್ಜೆ ಹಾಕಿತ್ತು. ಪ್ರೇಕ್ಷಕರು ತಲೆ ಆಡಿಸಿ ಹಾಡಿನ ಆನಂದ ಸವಿದರು. ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಈ ರೂಪಕವನ್ನು ಮರು ಪ್ರದರ್ಶನ ಮಾಡಲಾಯಿತು.

ಸೀತೆಯ ಪಾತ್ರದಲ್ಲಿ ಮೇಧಾ ಸಾಗರೇಕರ, ರಾವಣನಾಗಿ ಸುಶಾಂತ ಮುತ್ನಾಳ, ಲಕ್ಷ್ಮಣ ನಾಗಿ ಅಮೋಘ ಘಿವಾರಿ, ರಾಮನಾಗಿ ಅಪರ್ಣಾ ಮಿಟಗಾರ, ಹನಂತನ ಅವತಾರದಲ್ಲಿ ಚೇತನ ಅಭಿನಯಿಸಿದರು.

ಮುಖ್ಯ ಅತಿಥಿ ಪಟ್ಟಣ ಪಂಚಾಯ್ತಿ ಸದಸ್ಯ ಅಮೂಲ ಗುಂಜೀಕರ್ ಮಾತನಾಡಿ, ಮಕ್ಕಳಿಗೆ ನಮ್ಮ ಭವ್ಯ ಸಂಸ್ಕೃತಿಯ ಪರಿಚಯ ಮಾಡಿಸಿಕೊಡಬೇಕಾಗಿರುವುದು ಅಗತ್ಯವಾಗಿದೆ. ಮೊಬೈಲ್‌ ದಾಸರಾಗದೆ ಶಿಕ್ಷಣ, ಕ್ರೀಡೆ ಹಾಗೂ ನಮ್ಮ ಸಂಸ್ಕೃತಿ ಅರಿತು ಸರ್ವೋತೋಮುಖ ಬೆಳವಣಿಗೆ ಕಾಣಬೇಕು ಎಂದರು.

ನೆಸ್ಟ್ ಕ್ರಿಯೇಷನ್‌ ಫೌಂಡೇಷನ್‌ ಅಧ್ಯಕ್ಷ ಮಹಾದೇವ ಸಾಗರೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ವಾರಗಳ ಕಾಲ, ಮಕ್ಕಳಲ್ಲಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಚಿತ್ರಕಲೆ, ನೃತ್ಯ, ಚಕ್ಕಡಿಯಲ್ಲಿ ಪಟ್ಟಣ ಸುತ್ತುವ ಕಾರ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮಕ್ಕಳನ್ನು ರಂಜಿಸಿದವು ಎಂದರು.

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಕನ್ನಡ ಗೀತೆಗೆ ಚಿಣ್ಣರು ಹೆಜ್ಜೆ ಹಾಕಿ ಕನ್ನಡ ಕಂಪು ಮೊಳಗಿದರು. ಶಿಬಿರದ ಯಶಸ್ವಿಗೆ ಶ್ರಮಿಸಿದವರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಮಹಾದೇವಿ ಹಿರೇಮಠ, ಯಲ್ಲಾರಿ ಹುಬ್ಲೀಕರ, ರಮೇಶ ಕುನ್ನೂರಕರ, ರಾಜು ಕರ್ಲೆಕರ, ಮಂಜುನಾಥ ಬೆಂಡಿಗೇರಿ, ಲತಾ ವಿಜಾಪೂರ, ಅನ್ನಪೂರ್ಣ ಕೌಲಜಗಿ, ಬಿ.ಎಲ್. ದಾರ್ಲಾ, ಪುಂಡಲಿಕ ಪಾರ್ದಿ, ರಾಜು ಅಷ್ಟೇಕರ , ನಾರಾಯಣ ಪಟೇಲ, ಮಂಜುಳಾ ಮೇದಾರ, ಅನ್ನಪೂರ್ಣ ಹಿರೇಮಠ, ಸುನಿಲ ಸಾಗರೇಕರ, ಸವಿತಾ ಸಾಗರೆಕರ, ಪೂರ್ಣಿಮಾ ಮುತ್ನಾಳ, ಪುಷ್ಪಾ ಸಾಗರೇಕರ, ಕವಿತಾ ಹಸಬಿಮಠ, ಜಯಶ್ರೀ ಉಡುಪಿ, ಪ್ರಸಾದ ದಮ್ಮು, ಅಪ್ಪಣ್ಣ ಕಡಿ, ಅಶ್ವಿನಿ ಕರ್ಲೆಕರ, ರಾಣಿ ಹಸಬಿಮಠ. ಮಹೇಶ ಮುತ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT