ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುಗೋಡು | ರಂಗೋಲಿ ಸ್ಪರ್ಧೆ ಆಯೋಜನೆ: ಮೆಚ್ಚುಗೆ

Published 29 ಜನವರಿ 2024, 14:38 IST
Last Updated 29 ಜನವರಿ 2024, 14:38 IST
ಅಕ್ಷರ ಗಾತ್ರ

ಕುರುಗೋಡು: ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಅಂಗವಾಗಿ ವಿಪ್ರೋ ಸಂತೂರ್ ಕಂಪನಿ, ಕನ್ನಡಪರ ಸಂಘಟನೆಗಳು ಮತ್ತು ಸಮಾಜ ವಿಜ್ಞಾನ ವಿಚಾರ ವೇದಿಕೆ ವತಿಯಿಂದ ಭಾನುವಾರ ಮಹಿಳೆಯರಿಗೆ ತಾಲ್ಲೂಕು ಮಟ್ಟದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. 

ಸ್ಪರ್ಧೆಯಲ್ಲಿ 69ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಚಿತ್ತಾಕರ್ಷಕ ರಂಗೋಲಿಗಳು ನೋಡುಗರನ್ನು ಆಕರ್ಷಿಸಿದವು.

ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮಾತನಾಡಿ, ಮರೆಯಾಗುತ್ತಿರುವ ಗ್ರಾಮೀಣ ಸೊಗಡಿನ ಸಂಪ್ರದಾಯಿಕ ರಂಗೋಲಿ ಕಲೆಯನ್ನು ಉಳಿಸಿ ಬೆಳೆಸಲು ಕಾಲಕಾಲಕ್ಕೆ ಸ್ಪರ್ಧೆ ಆಯೋಜಿಸುವ ಅಗತ್ಯವಿದೆ ಎಂದರು.

ಶ್ರೀದೇವಿ (ಪ್ರಥಮ), ಶಾಂತಾ (ದ್ವಿತೀಯ), ಪ್ರೇಮಲತಾ (ತೃತಿಯ), ನಾಗಮ್ಮ, ವಿಜಯಲಕ್ಷ್ಮಿ, ರೇವತಿ ಮತ್ತು ಎನ್.ಭಾರತಿ (ಚತುರ್ಥ) ಬಹುಮಾನ ಪಡೆದವು.

ವಿಪ್ರೋ ಸಂತೂರ್ ಕಂಪನಿಯ ಸೈಯದ್ ಆಸೀಫ್, ಸಿರಿಗನ್ನಡ ಯುವಕ ಸಂಘದ ಅಧ್ಯಕ್ಷ ಎನ್.ಕೊಮಾರೆಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT