ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ; ಆರೋಪಿ ಕಾಲಿಗೆ ಗುಂಡೇಟು

Published 4 ಮೇ 2024, 22:03 IST
Last Updated 4 ಮೇ 2024, 22:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭ ಧರಿಸಲು ಕಾರಣನಾದ ಆರೋಪಿ ಸದ್ದಾಂ ಹುಸೇನ್ ಶುಕ್ರವಾರ ತಡರಾತ್ರಿ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

‘ತನಿಖೆಗಾಗಿ ಠಾಣೆಗೆ ಕರೆದೊಯ್ಯುವಾಗ, ಸದ್ದಾಂ ಹುಸೇನ್ ಪೊಲೀಸರಿಗೆ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಗುಂಡು ಹಾರಿಸಲಾಯಿತು. ಗಾಯಾಳುಗಳಾದ ಸದ್ದಾಂ ಹುಸೇನ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಗಮೇಶ ಹಾಗೂ ಕಾನ್‌ಸ್ಟೆಬಲ್‌ ಅರುಣ್‌ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಂಧನ ಪ್ರಕ್ರಿಯೆಗೆ ಪೂರಕವಾಗಿ ರಾತ್ರಿ 12.10ಕ್ಕೆ ಸುತಗಟ್ಟಿ ಗ್ರಾಮಕ್ಕೆ ಪೊಲೀಸರು ತೆರಳಿದ ಸಂದರ್ಭದಲ್ಲಿ ಸದ್ದಾಂ ಹುಸೇನ್ ಬಟನ್‌ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ. ಆತ್ಮರಕ್ಷಣೆಗಾಗಿ ವಿದ್ಯಾಗಿರಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸಂಗಮೇಶ ಡಿಂಗಿನಾಳ ಒಂದು ಗುಂಡು ಗಾಳಿಯಲ್ಲಿ ಹಾರಿಸಿ, ಇನ್ನೊಂದು ಗುಂಡನ್ನು ಅವನ ಎಡಗಾಲಿಗೆ ಹೊಡೆದರು’ ಎಂದು ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT