ಸೋಮವಾರ, ಆಗಸ್ಟ್ 2, 2021
26 °C

ರಾತ್ರಿ 12ರ ವರೆಗೆ ಕರ್ತವ್ಯ ನಿರ್ವಹಿಸಿ ಅಧಿಕಾರ ಹಸ್ತಾಂತರಿಸಿದ ಆಯುಷ್ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಗಮೇಶ ಕಲಹಾಳ ಅವರು ತಮ್ಮ ಸೇವಾ ನಿವೃತ್ತಿಯ ಕೊನೆಯಗಳಿಗೆಯವರೆಗೂ ಕರ್ತವ್ಯ ನಿರ್ವಹಿಸಿ ಮೇ 31ರ ಮಧ್ಯ ರಾತ್ರಿ 12ಕ್ಕೆ ಗಂಟೆಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಯ ಆಡಳಿತಾತ್ಮಕ ಕಾರ್ಯಭಾರವನ್ನು ಡಾ. ಎಸ್.ಸುಮಂಗಲಾ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸರ್ಕಾರದ ನಿಯಮದಂತೆ ಒಂದು ದಿನವೆಂದರೆ ಮಧ್ಯರಾತ್ರಿ 12 ರಿಂದ ಮುಂದಿನ ದಿನದ ಮಧ್ಯರಾತ್ರಿ 12ರ ವರೆಗೆ ಎಂದು ಹೇಳಲಾಗಿದೆ. ಒಂದು ದಿನದ ವೇತನವೆಂದರೆ 24 ಗಂಟೆಗಳಿಗೆ ನೀಡುವಂತಹದ್ದು. ಹೀಗಾಗಿ ನಾನು ನನ್ನ ವೃತ್ತಿ ಜೀವನದ ಕೊನೆಯ ಗಳಿಗೆಯವರೆಗೂ ಕೆಲಸ ಮಾಡಿ ಅಧಿಕಾರ ಹಸ್ತಾಂತರಿಸಿದ್ದೇನೆ’ ಎಂದರು.

ಮಧ್ಯರಾತ್ರಿ 12ಕ್ಕೆ ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಯ ಕಾರ್ಯಭಾರವನ್ನು ಹಿರಿಯ ವ್ಯೆದ್ಯಾಧಿಕಾರಿ ಡಾ. ಮೀನಾಕ್ಷಿ ಅವಲೂರು ಅವರಿಗೆ ವಹಿಸಿದರು.

ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಬಿ.ಪಿ. ಪೂಜಾರಿ, ಸಹಾಯಕ ಆಡಳಿತಾಧಿಕಾರಿ ಅಶೋಕ ಅಕ್ಕೇರಿ, ಆಯುಷ್ ಇಲಾಖೆ ವ್ಯೆದ್ಯಾಧಿಕಾರಿಗಳಾದ ಡಾ. ಎ.ಎಸ್‌. ಮಲ್ಲಿಕಾರ್ಜುನ, ಡಾ. ನಿಂಗಪ್ಪ ಕಿನ್ನಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು