‘ಮಾಡಿದ ತಪ್ಪು ಮರುಕಳಿಸಬಾರದು’
‘ಮಾಡಿರುವ ಚಿಕ್ಕಪುಟ್ಟ ತಪ್ಪುಗಳನ್ನು ತಿದ್ದುಕೊಂಡು ವೃತ್ತಿ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು. ತಪ್ಪಿನಿಂದ ಪಾಠ ಕಲಿತಾಗಲೇ ಹೊಸತು ಸೃಷ್ಟಿಯಾಗುತ್ತದೆ. ಮಾಡಿರುವ ತಪ್ಪನ್ನು ಮತ್ತೊಮ್ಮೆ ಮಾಡಬಾರದು. ಉದ್ಯೋಗ ಸಿಕ್ಕಿತು ಎಂದಾಗ ಎಲ್ಲವೂ ಮುಗಿಯಿತು ಎಂದಲ್ಲ. ಜೀವನ ಪೂರ್ತಿ ಕಲಿಕೆ ಇರುತ್ತದೆ. ಯಾರೋ ಹೇಳಿದರು, ಒತ್ತಾಯ ಮಾಡಿದರು ಎಂದು ಕಲಿಯಬಾರದು. ಆಸಕ್ತಿಯಿಂದ ಕಲಿಯಬೇಕು. ಸಕಾರಾತ್ಮಕ ಭಾವನೆ ಹಾಗೂ ವರ್ತನೆ ಬೆಳೆಸಿಕೊಳ್ಳಬೇಕು’ ಎಂದು ದೇಶಪಾಂಡೆ ಫೌಂಡೇಷನ್ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ ಹೇಳಿದರು.