ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಹಾವು ಕಡಿತ: ಆಸ್ಪತ್ರೆಗೆ ಕಳೇಬರ ತಂದ ಯುವಕ

Published : 19 ಸೆಪ್ಟೆಂಬರ್ 2024, 16:20 IST
Last Updated : 19 ಸೆಪ್ಟೆಂಬರ್ 2024, 16:20 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ತನಗೆ ಕಚ್ಚಿದ ಹಾವನ್ನು ಕೊಂದ ಯುವಕನೊಬ್ಬ, ಅದರ ಕಳೇಬರದೊಂದಿಗೆ ನಗರದ ಕೆಎಂಸಿಆರ್‌ಐಗೆ ಬಂದ ಘಟನೆ ಬುಧವಾರ ನಡೆದಿದೆ.

ತಾಲ್ಲೂಕಿನ ಇಂಗಳಗಿ ಗ್ರಾಮದ ಫಕೀರಪ್ಪ ಅಣ್ಣಿಗೇರಿ ಎಂಬಾತ ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಹಾವನ್ನು ಕೊಂದು, ಅದರ ಕಳೇಬರವನ್ನು ವೈದ್ಯರಿಗೆ ತೋರಿಸಿ, ಚಿಕಿತ್ಸೆಗಾಗಿ ವಿನಂತಿಸಿದ್ದಾನೆ. 

‘ಹಾವು ಕಡಿತಕ್ಕೊಳಗಾದ ಫಕೀರಪ್ಪಗೆ ಚಿಕಿತ್ಸೆ ಮುಂದುವರಿದ್ದು, ಆತನ ಆರೋಗ್ಯ ಸ್ಥಿರವಾಗಿದೆ’ ಎಂದು ಕೆಎಂಸಿಆರ್‌ಐ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT