ಹುಬ್ಬಳ್ಳಿ: 2025ರ ಡಿಸೆಂಬರ್ನಲ್ಲಿ ನೈರುತ್ಯ ರೈಲ್ವೆಯು ಒಟ್ಟು 50,70,000 ಟನ್ ಮೂಲ ಸರಕುಗಳನ್ನು ಸಾಗಣೆ ಮಾಡಿದ್ದು, ಒಂದೇ ತಿಂಗಳಲ್ಲಿ ಅತ್ಯಧಿಕ ಸರಕು ಸಾಗಿಸಿರುವುದು ನೈರುತ್ಯ ರೈಲ್ವೆ ಇತಿಹಾಸದಲ್ಲೇ ಮೊದಲು.

2024ರ ಮಾರ್ಚ್ನಲ್ಲಿ 50,40,000 ಟನ್ ಸರಕು ಸಾಗಿಸಿದ್ದ ದಾಖಲೆಯನ್ನು ಮೀರಿಸಿದೆ. ಕಬ್ಬಿಣದ ಅದಿರು 21 ಲಕ್ಷ ಟನ್, ಕಲ್ಲಿದ್ದಲು 11 ಲಕ್ಷ ಟನ್, ಉಕ್ಕು 9,10,000 ಟನ್, ಕಚ್ಚಾ ವಸ್ತು 1.5 ಲಕ್ಷ ಟನ್, ಖನಿಜ ತೈಲ 2.20 ಲಕ್ಷ ಟನ್, ರಸಗೊಬ್ಬರ 1 ಲಕ್ಷ ಟನ್ ಸಾಗಣೆ ಮಾಡಲಾಗಿದೆ.

2025–26ನೇ ಹಣಕಾಸು ವರ್ಷದ ಏಪ್ರಿಲ್ನಿಂದ ಡಿಸೆಂಬರ್ವರೆಗೆ 3.80 ಕೋಟಿ ಟನ್ ಸರಕು ಸಾಗಿಸಿರುವುದು ದಾಖಲೆಯಾಗಿದೆ. 2023–24ನೇ ಹಣಕಾಸು ವರ್ಷದಲ್ಲಿ 3.6 ಕೋಟಿ ಟನ್ ಸರಕು ಸಾಗಣೆ ಮಾಡಲಾಗಿತ್ತು.

ಡಿಸೆಂಬರ್ನಲ್ಲಿ ಸರಕು ಸಾಗಣೆಯಿಂದ ₹503.84 ಕೋಟಿ, ಪ್ರಯಾಣಿಕರ ಆದಾಯ ₹296.18 ಕೋಟಿ, ವಿವಿಧ ಮೂಲಗಳಿಂದ ₹10.31 ಕೋಟಿಗೆ ಸೇರಿ ಒಟ್ಟು ₹839.70 ಕೋಟಿ ಆದಾಯ ಗಳಿಸಿದೆ. ಸುಮಾರು 1.46 ಕೋಟಿ ಪ್ರಯಾಣಿಕರು ನೈರುತ್ಯ ರೈಲ್ವೆಯ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ.

2025ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ ಒಟ್ಟು ₹6,922.94 ಕೋಟಿ ಆದಾಯ ಗಳಿಸಿದ್ದು, ಪ್ರಯಾಣಿಕರ ಆದಾಯ ₹2,543.44 ಕೋಟಿ, ಸರಕು ಸಾಗಣೆ ಆದಾಯ ₹3,969.81 ಕೋಟಿ ಮತ್ತು ವಿವಿಧ ಮೂಲಗಳಿಂದ ₹157.70 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.