ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಲ್‌ಇ ಸಂಸ್ಥೆಯ ಅಂತರಶಾಲೆಗಳ ಕ್ರೀಡಾಕೂಟ

Published : 31 ಆಗಸ್ಟ್ 2024, 16:14 IST
Last Updated : 31 ಆಗಸ್ಟ್ 2024, 16:14 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಇಲ್ಲಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕ್ರೀಡಾ ದಿನಾಚರಣೆ ಅಂಗವಾಗಿ  ವಿವಿಧ ಕೆಎಲ್‌ಇ ಸಂಸ್ಥೆಯ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟವನ್ನು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪಿ.ಜಿ.ತಿವಾರಿ ಉದ್ಘಾಟಿಸಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಎಸ್‌.ಅನಾಮಿ, ಕ್ರೀಡಾ ಚಟುವಟಿಕೆಗಳ ಸಂಯೋಜಕ ಪ್ರೊ.ವಿಜಯಕುಮಾರ ನಿಂಬಗಲ್‌, ಕ್ರೀಡಾ ನಿರ್ದೇಶಕ ಜಯದೇವ ದನದಮನಿ ಹಾಗೂ ಕ್ರೀಡಾ ವಿಭಾಗದ ಸಿಬ್ಬಂದಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿ–ಧಾರವಾಡ ಕೆಎಲ್‌ಇ ಶಾಲೆಗಳ ಒಟ್ಟು 200 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಧ್ಯಾಪಕ ನಾಗರಾಜ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.

ಫಲಿತಾಂಶ: ಬಾಸ್ಕೆಟ್‌ಬಾಲ್‌ ಬಾಲಕರ ವಿಭಾಗ: ಮಂಜುನಾಥನಗರ ಕೆಎಲ್‌ಇ ಸಿಬಿಎಸ್‌ಇ ಶಾಲೆ(ಪ್ರಥಮ), ರಾಯಾಪುರ ಕೆಎಲ್‌ಇ ಸಿಬಿಎಸ್‌ಇ ಶಾಲೆ(ದ್ವಿತೀಯ)

ಬಾಸ್ಕೆಟ್‌ಬಾಲ್‌ ಬಾಲಕಿಯರ ವಿಭಾಗ: ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆ(ಪ್ರಥಮ), ರಾಯಾಪುರ ಕೆಎಲ್‌ಇ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆ(ದ್ವಿತೀಯ)

ಬ್ಯಾಡ್ಮಿಂಟನ್‌ ಸಿಂಗಲ್ಸ್‌(ಬಾಲಕರು):ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ಗಿರೀಶ್ ಗೌಡ(ಪ್ರಥಮ), ರಾಯಾಪುರ ಕೆಎಲ್‌ಇ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ಆರವ್‌ ಪಾಟೀಲ್‌(ದ್ವಿತೀಯ), ಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ಚಿನ್ಮಯ್‌ ಎಚ್‌(ತೃತೀಯ)

ಬ್ಯಾಡ್ಮಿಂಟನ್‌ ಸಿಂಗಲ್ಸ್‌(ಬಾಲಕಿಯರು): ರಾಯಾಪುರ ಕೆಎಲ್‌ಇ  ಸಿಬಿಎಸ್‌ಇ ಶಾಲೆಯ ವರ್ಷಾ(ಪ್ರಥಮ), ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ  ದೃತಿ(ದ್ವಿತೀಯ),ಹುಬ್ಬಳ್ಳಿಯ ಕೆಎಲ್‌ಇ ಕಟ್ಟಿಮನಿ ಶಾಲೆಯ ಅಮೃತಾ ಎಚ್‌

ಬ್ಯಾಡ್ಮಿಂಟನ್‌ ಡಬಲ್ಸ್‌(ಬಾಲಕರು): ರಾಯಾಪುರ ಕೆಎಲ್‌ಇ  ಸಿಬಿಎಸ್‌ಇ ಶಾಲೆಯ ವಿಹಾನ್‌ ಮತ್ತು ಧರ್ವಿನ್‌ (ಪ್ರಥಮ), ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ದರ್ಶಿತ್‌ ಮತ್ತು ಪರೀಕ್ಷಿತ್‌(ದ್ವಿತೀಯ), ಹುಬ್ಬಳ್ಳಿಯ ಕೆಎಲ್‌ಇ ಕಟ್ಟಿಮನಿ ಶಾಲೆಯ ಅಭಿಷೇಕ ಮತ್ತು ಸಿದ್ದಪ್ಪ(ತೃತೀಯ)

ಬ್ಯಾಡ್ಮಿಂಟನ್‌ ಡಬಲ್ಸ್‌(ಬಾಲಕಿಯರು): ರಾಯಾಪುರ ಕೆಎಲ್‌ಇ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ಅಭಿಜ್ಞಾ ಮತ್ತು ಸಿಂಚನಾ(ಪ್ರಥಮ), ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ಶ್ರಾವಣಿ ಮತ್ತು ಪಲ್ಗುಣಿ(ದ್ವಿತೀಯ), ಹುಬ್ಬಳ್ಳಿಯ ಕೆಎಲ್‌ಇ ಕಟ್ಟಿಮನಿ ಶಾಲೆಯ  ಲಕ್ಷ್ಮಿ ಮತ್ತು ಉಮಾ(ತೃತೀಯ)

ಟೇಬಲ್ ಟೆನಿಸ್‌ ಸಿಂಗಲ್ಸ್‌(ಬಾಲಕರು):ಮಂಜುನಾಥ ನಗರದ ಕೆಎಲ್‌ಇ ಸಿಬಿಎಸ್‌ಇ ಶಾಲೆಯ ಗಗನದೀಪ್‌(ಪ್ರಥಮ), ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ಕುಂದನ್ ಪಿ(ದ್ವಿತೀಯ), ಮಂಜುನಾಥ ನಗರದ ಕೆಎಲ್‌ಇ ಸಿಬಿಎಸ್‌ಇ ಶಾಲೆಯ ಸುಮಿತ್‌ ಆರ್‌.ಬಿ(ತೃತೀಯ)

ಟೇಬಲ್ ಟೆನಿಸ್‌ ಸಿಂಗಲ್ಸ್‌(ಬಾಲಕಿಯರು): ಮಂಜುನಾಥ ನಗರದ ಕೆಎಲ್‌ಇ ಸಿಬಿಎಸ್‌ಇ ಶಾಲೆಯ ರೀತ್‌ ವಿ.ಎಂ(ಪ್ರಥಮ), ಹರ್ಷಿತಾ ವಿ.ಎಸ್‌(ದ್ವಿತೀಯ), ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಖರೆ ಇಂಗ್ಲಿಷ್‌ ಮಾಧ್ಯಮ ಸಿಬಿಎಸ್‌ಇ ಶಾಲೆಯ ತನುಶ್ರೀ ಎಸ್‌(ತೃತೀಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT