ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ವರವಾದ ವರ್ಗಾವಣೆ: ಬಸವರಾಜ ಹೊರಟ್ಟಿ

Last Updated 2 ಆಗಸ್ಟ್ 2021, 1:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆ ನೀತಿ ನಿಯಮ ಬದಲಿಸುವ ವೇಳೆ ಶಿಕ್ಷಕರೇ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಅವರೇ ಅದನ್ನು ಸ್ವಾಗತಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಭಾನುವಾರ ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಶಿಕ್ಷಕರ ನೇಮಕಾತಿ ‌ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆ. ಶಿಕ್ಷಕರ ಗೋಳಾಟ, ಸಮಸ್ಯೆಗಳನ್ನು ಕಣ್ಣಾರೆ ಕಂಡು, ವರ್ಗಾವಣೆ ನೀತಿ ಬದಲಿಸಲು ಮುಂದಾದೆ. ಈಗ ಇದರಿಂದ ಬಹಳಷ್ಟು ಶಿಕ್ಷಕರಿಗೆ ಅನುಕೂಲವಾಗಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು. ಸಂಘದ ಅಧ್ಯಕ್ಷ ಯಲ್ಲಪ್ಪಗೌಡ ಕೆ.ಬಿ., ಡಾ. ಶೇಖರ ಎಲ್‌, ಶಿವಾನಂದ ಕೂಡಗಿ, ಎಸ್.ಟಿ. ಬೆಳಕೊಪ್ಪ, ಎಸ್.ವಿ. ಮಾಚಾ, ಎಲ್.ಡಿ. ನಾಯಕ, ನಾಗರಾಜ ಬಾಗೂನವರ, ವಿ.ಎಸ್. ದುಮ್ಮೇರ, ಶ್ರೀಧರ ಗಸ್ತಿ, ಎಸ್.ಜಿ. ಹಿರೇಮಠ, ಪದ್ಮಾವತಿ ಜಾಡರ, ಎಸ್.ಪಿ. ಹಿರೇಮಠ, ಎಚ್.ಬಿ. ದುಮ್ಮವಾಡ, ಎಚ್. ಪರಮೇಶ್ವರಪ್ಪ, ಶ್ರೀದೇವಿ ಬೋರ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT