ಹುಬ್ಬಳ್ಳಿ: ‘ನಾಲ್ಕು ಸಾರಿಗೆ ನಿಗಮಗಳ ನೌಕರರ 38 ತಿಂಗಳ ಬಾಕಿ ವೇತನ ಪಾವತಿ ಮತ್ತು 2024ರ ವೇತನ ಪರಿಷ್ಕರಣೆ ಜಾರಿಗೆ ಆಗ್ರಹಿಸಿ ಆಗಸ್ಟ್ 5ರ ಬೆಳಿಗ್ಗೆ 6ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು’ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಅಧ್ಯಕ್ಷ ಕೆ.ಎಸ್.ಶರ್ಮಾ ಇಲ್ಲಿ ಹೇಳಿದರು.

‘ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗಬೇಕು. 2016ರಿಂದ ಜಾರಿಯಲ್ಲಿದ್ದ ವೇತನ ಪರಿಷ್ಕರಣೆ 2019ರಲ್ಲಿ ಮುಕ್ತಾಯವಾಗಿತ್ತು. 2020ರಿಂದ ಹೊಸ ವೇತನ ಪರಿಷ್ಕರಣೆಯಾಗಿ ಜಾರಿ ಆಗಬೇಕಿತ್ತು’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘2023ರಲ್ಲಿ ಸರ್ಕಾರ ಶೇ 15ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, 2019ರಿಂದಲೇ ಈ ಪರಿಷ್ಕರಣೆಯು ಅನ್ವಯವಾಗಲಿದೆ ಎಂದು ತಿಳಿಸಿತ್ತು. ಆದರೆ ಸರ್ಕಾರ ಇದುವರೆವಿಗೂ ಬಾಕಿ ವೇತನವನ್ನು ಪಾವತಿಸಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.