ಹುಬ್ಬಳ್ಳಿ | ದಾಖಲೆಗಳಿಲ್ಲದೆ ಹಣ ಸಾಗಾಟ; ₹1.14 ಕೋಟಿ ವಶ

ಹುಬ್ಬಳ್ಳಿ: ದಾಖಲೆಗಳಿಲ್ಲದ, ಅಕ್ರಮವಾಗಿ ಖಾಸಗಿ ಬಸ್‌ನಲ್ಲಿ ಹಣಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಉಪನಗರ ಠಾಣೆ ಪೊಲೀಸರು ನಗರದ ಬಸವವನ ಬಳಿ ಶನಿವಾರ ರಾತ್ರಿ ಬಂಧಿಸಿ, ₹1.14 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ಕೇಶ್ವಾಪುರದ ಮಯೂರ ಎಸ್ಟೇಟ್ ನಿವಾಸಿ, ವಿದ್ಯಾರ್ಥಿ ರಿತೀಕ್ ಬಸವಾ ಬಂಧಿತ ಆರೋಪಿ. ಅವನು ಬಸವವನದಿಂದ ವಿಆರ್‌ಎಲ್ ಬಸ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ.
ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ದಾಖಲೆಗಳಿಲ್ಲದೆ ಎರಡು ಬ್ಯಾಗ್‌ನಲ್ಲಿ ಹಣ ಸಾಗಿಸುತ್ತಿರುವುದು ಕಂಡು ಬಂದಿದೆ.
ಮಂಗಳೂರಿನಲ್ಲಿ ಬಂಗಾರ ಖರೀದಿಸಲು ತೆರಳುತ್ತಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.