ಹುಬ್ಬಳ್ಳಿ: ಡಿಜಿಟಲ್ ಪಾವತಿ (ಯುಪಿಐ) ಮೂಲಕ ಟಿಕೆಟ್ ನೀಡುವಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಹೇಳಿದರು.

ಫೋನ್ಪೇ ಕಂಪನಿ ಸಹಯೋಗದಲ್ಲಿ ಜುಲೈನಿಂದ ಆರಂಭಿಸಿದ ‘ಯುಪಿಐ ಪಾವತಿ ವಹಿವಾಟು ತ್ರೈಮಾಸಿಕ ಅಭಿಯಾನ’ದ ಭಾಗವಾಗಿ ಮೊದಲ ತಿಂಗಳು ಅತಿಹೆಚ್ಚು ಯುಪಿಐ ವಹಿವಾಟು ಮಾಡಿದ ನಿರ್ವಾಹಕರು, ಘಟಕಗಳು ಹಾಗೂ ವಿಭಾಗಕ್ಕೆ ಪ್ರಶಂಸಾ ಪತ್ರ ನೀಡಲು ಕೇಂದ್ರ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಿಜಿಟಲ್ ಪಾವತಿ ಹೆಚ್ಚಳ ಮಾಡುವುದಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಿರ್ವಾಹಕರು ಡಿಜಿಟಲ್ ಪಾವತಿ ಬಗ್ಗೆ ಪ್ರಯಾಣಿಕರಿಗೆ ಹೆಚ್ಚಿನ ತಿಳಿವಳಿಕೆ ನೀಡಿ ಯುಪಿಐ ವಹಿವಾಟು ಹೆಚ್ಚಳ ಮಾಡಬೇಕು ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಮಾತನಾಡಿ, ಸಂಸ್ಥೆಗೆ ಬರುವ ಆದಾಯವನ್ನು ಯುಪಿಐ ಮೂಲಕ ಪಾವತಿಸುವ ಸಂಬಂಧ ಇನ್ನೂ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ವಿಭಾಗವಾರು ಪ್ರಶಂಸಾ ಪತ್ರ ಪಡೆದ ನಿರ್ವಾಹಕರು: ರಮೇಶ ಸಿ.ಸುಲೇಭಾವಿ–ಪ್ರಥಮ, ಮಹಮ್ಮದರಫಿ ಇನಾಮದಾರ–ದ್ವಿತೀಯ (ಧಾರವಾಡ ಗ್ರಾಮಾಂತರ ವಿಬಾಗ), ಶಾಬುದ್ದಿನ ಕೆ. ಸಾವಂತನವರ–ಪ್ರಥಮ, ಉಮೇಶ ಬಿ. ಹಂಚನಾಳ–ದ್ವಿತೀಯ (ಹುಬ್ಬಳ್ಳಿ-ಗ್ರಾಮಾಂತರ ವಿಬಾಗ), ಎಂ.ಎಂ.ತೆಗೂರ–ಪ್ರಥಮ, ಐ.ಕೆ.ಮ್ಯಾಗೇರಿ–ದ್ವಿತೀಯ (ಬೆಳಗಾವಿ ವಿಭಾಗ), ಎಲ್.ಟಿ.ದಾಸರ–ಪ್ರಥಮ, ಸುರೇಶ ಪೂಜಾರಿ–ದ್ವಿತೀಯ (ಚಿಕ್ಕೋಡಿ ವಿಭಾಗ), ಎಲ್.ಬಿ.ಕಲಕರ್ಣಿ–ಪ್ರಥಮ, ವೈ.ಎಲ್ ಶಿವರೆಡ್ಡಿ–ದ್ವಿತೀಯ (ಗದಗ ವಿಭಾಗ), ಬಿ.ಸಿ.ಕಟ್ಟಿಮನಿ–ಪ್ರಥಮ, ಕೆ.ಬಿ.ಬೆನ್ನೂರ–ದ್ವಿತೀಯ (ಬಾಗಲಕೋಟೆ ವಿಭಾಗ), ವಿ.ಸಿ.ಪರದೇಶಿ–ಪ್ರಥಮ, ಎಸ್.ಎಸ್.ಪಟ್ಟಣಶೆಟ್ಟಿ–ದ್ವಿತೀಯ (ಹಾವೇರಿ ವಿಭಾಗ), ಶಂಕರ ಹವಳಪ್ಪನವರ–ಪ್ರಥಮ, ಶೃತಿ ಆರ್.,–ದ್ವಿತೀಯ (ಉತ್ತರ ಕನ್ನಡ ವಿಭಾಗ), ಪ್ರವೀಣಕುಮಾರ ಮಣ್ಣೂರ–ಪ್ರಥಮ, ಎ.ಎಚ್.ಪಾರ್ವತಿ–ದ್ವಿತೀಯ (ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗ).

ಸಾರಿಗೆ ವಿಭಾಗವಾರು ಸಾಧನೆಯಲ್ಲಿ ಚಿಕ್ಕೋಡಿ ವಿಭಾಗ ಪ್ರಥಮ, 100ಕ್ಕಿಂತ ಹೆಚ್ಚು ಶೆಡ್ಯುಲ್ ಇರುವ ಘಟಕಗಳ ಪೈಕಿ ಬೆಳಗಾವಿ 1ನೇ ಘಟಕ ಪ್ರಥಮ, ಹುಬ್ಬಳ್ಳಿ ಗ್ರಾಮಾಂತರ 2ನೇ ಘಟಕ ದ್ವಿತೀಯ ಹಾಗೂ 100ಕ್ಕಿಂತ ಕಡಿಮೆ ಶೆಡ್ಯುಲ್ ಇರುವ ಘಟಕಗಳ ಪೈಕಿ ಹಾನಗಲ್ ಘಟಕ ಪ್ರಥಮ ಸ್ಥಾನ ಪಡೆದಿದೆ.

ಸಮಾರಂಭದಲ್ಲಿ ಇಲಾಖಾ ಮುಖ್ಯಸ್ಥ ಕೆ.ಎಲ್ ಗುಡೆನ್ನವರ, ಚಿಕ್ಕೋಡಿ ವಿಭಾಗೀಯ ಸಾರಿಗೆ ಅಧಿಕಾರಿಗಳಾದ ಎ.ಆರ್.ಛಬ್ಬಿ, ನವೀನಕುಮಾರ ತಿಪ್ಪಾ, ಹನುಮನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.