ಉಪ್ಪಿನಬೆಟಗೇರಿ: ಗ್ರಾಮದ ಬನಶಂಕರಿ ದೇವಸ್ಥಾನದ ಕಳಸಾರೋಹಣ ಅಂಗವಾಗಿ ಶುಕ್ರವಾರ ಸನ್ಮಾನ ಹಾಗೂ ಧಾರ್ಮಿಕ ಸಮಾರಂಭ ಜರುಗಿತು.

ಮಮದಾಪುರ ಮೂರುಸಾವಿರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ‘ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಕಾರ್ಯವನ್ನು ಮಠ, ಮಂದಿರಗಳು ಮಾಡುತ್ತಿವೆ. ಕಳಸಾರೋಹಣ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ’ ಎಂದರು.

ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಕವಲಗೇರಿ ಶಿವಾನಂದ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ, ಕಲ್ಲೂರ ಆರೂಢ ವಿದ್ಯಾಶ್ರಮದ ಲಲಿತಮ್ಮತಾಯಿ, ನಾಗನೂರು ಮಠದ ಸದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬೆಳಿಗ್ಗೆ ಅರ್ಚಕರು ಪೂಜೆ, ಹೋಮ ನಡೆಸಿದರು. ನಂತರ ಸ್ವಾಮೀಜಿಗಳ ನೇತೃತ್ವದಲ್ಲಿ ಗೋಪುರದ ಕಳಸಾರೋಹಣ ನೆರವೇರಿಸಲಾಯಿತು.

ರಾತ್ರಿ 9ಗಂಟೆಗೆ ರಾಧಾ ಕೃಷ್ಣ ಬಯಲಾಟ ಪ್ರದರ್ಶನ ನಡೆಯಿತು. ಪ್ರಮುಖರಾದ ರವಳಪ್ಪ ಶಿನಗಾರಿ, ಜ್ಞಾನೇಶ್ವರ ಮೊರಕಾರ, ಬಸವರಾಜ ಕುಸುಬಿ, ಮಹಾದೇವಪ್ಪ ತೇಗೂರ, ವಿಠ್ಠಲ ಶಿನಗಾರಿ, ಸೋಪಾನ ಲೋಲಿ, ಶಂಕರ ಕುಸುಬಿ, ನಾರಾಯಣ ಲೋಲಿ, ಭೀಮಪ್ಪ ದುರ್ಗಾಡಿ, ಮಂಜುನಾಥ ಕುಸುಬಿ, ಚಂದ್ರಶೇಖರ ಅರಳಿಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.