ಹುಬ್ಬಳ್ಳಿ: ಯುಪಿಎಸ್ಸಿ ಪರೀಕ್ಷೆ ಕಠಿಣ ಸವಾಲು. ಅದರಲ್ಲಿ ಯಶಸ್ವಿಯಾಗಲು ‘ಮ್ಯಾರಥಾನ್’ ಓದು ಮುಖ್ಯ. ಹಳೆಯ ಪ್ರಶ್ನೆಪತ್ರಿಕೆ ಬಿಡಿಸುವುದು, ಓದಿದ್ದದ್ದನ್ನು ಮನನ ಮಾಡುವುದರಿಂದ ಆತ್ಮವಿಶ್ವಾಸ ಮೂಡುತ್ತದೆ. ಸಮಗ್ರ ಅಧ್ಯಯನಕ್ಕೆ ಒತ್ತು ನೀಡಿದ್ದರಿಂದ ಯಶಸ್ಸು ಸಿಕ್ಕಿತು ...

–ಇವು ಯುಪಿಎಸ್ಸಿ ಪರೀಕ್ಷೆಯಲ್ಲಿ 206ನೇ ರ್ಯಾಂಕ್ ಪಡೆದಿರುವ ನಗರದ ಅಕ್ಷಯ ಕಾಲೊನಿ ನಿವಾಸಿ, ವೈದ್ಯೆ ಡಾ. ಇಶಿಕಾ ಸಿಂಗ್ ಅವರ ಮಾತುಗಳು.

ಉತ್ತಮ ಫಲಿತಾಂಶ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಮೊದಲ ಪ್ರಯತ್ನವಾಗಿದ್ದರಿಂದ ರ್ಯಾಂಕಿಂಗ್ ಬಗ್ಗೆ ಗೊತ್ತಿರಲಿಲ್ಲ. 206ನೇ ರ್ಯಾಂಕ್ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದು ಸಂತಸ ಹಂಚಿಕೊಂಡರು.

‘ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗೆ ಮನೆಯಲ್ಲೇ ಇದ್ದು ಓದಿದೆ. ಆನ್ಲೈನ್ ಕೋಚಿಂಗ್ ಪಡೆದೆ. ಪ್ರತಿ ದಿನ ಎರಡೂವರೆ ಗಂಟೆ ಆನ್ಲೈನ್ ತರಗತಿ ಇರುತಿತ್ತು. ಆ ನಂತರ ನಾನೇ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಓದುತ್ತಿದ್ದೆ. ಎಷ್ಟೇ ಬುದ್ಧಿವಂತಿಕೆ ಇದ್ದರೂ ನಿರಂತರ ಓದು ಇರಬೇಕು. ‘ಹಾರ್ಡ್ವರ್ಕ್’ ಜತೆಗೆ ‘ಸ್ಮಾರ್ಟ್ವರ್ಕ್’ ಇದ್ದರೆ ಮಾತ್ರ ಯಶಸ್ಸು ಸಾಧ್ಯ’ ಎನ್ನುತ್ತಾರೆ ಅವರು.

ಕೋಚಿಂಗ್ ಸೆಂಟರ್ನಿಂದ ಆನ್ಲೈನ್ ಪರೀಕ್ಷೆ ಎದುರಿಸುತ್ತಿದ್ದೆ. ದೆಹಲಿಯಲ್ಲಿ ಅಣಕು ಸಂದರ್ಶನ ತರಬೇತಿ, ದಿನ ಪತ್ರಿಕೆಗಳ ಓದು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಹೀಗೆ ಒಂದೇ ವಿಷಯದ ಕಡೆ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಿದೆ ಎಂದರು.

ವೈದ್ಯೆಯಾಗುವ ಕನಸಿತ್ತು: ಚಿಕ್ಕಂದಿನಿಂದಲೂ ವೈದ್ಯೆಯಾಗಬೇಕು ಎಂಬ ಕನಸಿತ್ತು. ಅದರಂತೆ ನೀಟ್ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 812ನೇ ರ್ಯಾಂಕ್, ರಾಜ್ಯಕ್ಕೆ 30ನೇ ರ್ಯಾಂಕ್ ಬಂದಿತ್ತು. ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿದೆ. ಯುಪಿಎಸ್ಸಿ ಬಗ್ಗೆ ಗೊತ್ತಿರಲಿಲ್ಲ. ಎಂಬಿಬಿಎಸ್ ಮುಗಿಸಿ ಇಂಟರ್ನ್ಶಿಪ್ ಮಾಡುವಾಗ ತಂದೆಯ ಚಿಕ್ಕಪ್ಪ ಯುಪಿಎಸ್ಸಿ ಮಾಡುವಂತೆ ಸಲಹೆ ನೀಡಿದ್ದರು.

ಎಂಬಿಬಿಎಸ್ ಮುಗಿಸಿ ಇಂಟರ್ನ್ಶಿಪ್ ಆದ ಮೇಲೆ 2023ರ ಜೂನ್ನಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. 2024ರಲ್ಲಿ ಪರೀಕ್ಷೆ ಬರೆದಿದ್ದೆ. ಈಗ ನನ್ನ ಗುರಿ ಜತೆಗೆ ಅಜ್ಜನ ಕನಸು ನನಸು ಮಾಡಿದ ಖುಷಿ ಇದೆ ಎಂದರು.

ನನಗೆ ಐಎಎಸ್, ಐಪಿಎಸ್ನಲ್ಲಿ ಆಸಕ್ತಿ ಇಲ್ಲ. ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್), ಇಂಡಿಯನ್ ಆಡಿಟ್ ಆ್ಯಂಡ್ ಅಕೌಂಟ್ಸ್ ಸರ್ವಿಸ್ (ಐಎಎಎಸ್) ಅಧಿಕಾರಿಯಾಗುವ ಆಸೆ ಇದೆ ಎಂದು ಹೇಳಿದರು.

ಕುಟುಂಬದ ಹಿನ್ನೆಲೆ: ಇಶಿಕಾ ಅವರ ತಂದೆ ರಾಜೇಶಕುಮಾರ್ ಸಿಂಗ್ ಉದ್ಯಮಿ, ತಾಯಿ ಕಿರಣ್ಸಿಂಗ್ ಹಿಂದಿ ಉಪನ್ಯಾಸಕಿ ಆಗಿದ್ದಾರೆ. ಸಹೋದರ ರಿಶಿತ್ ಸಿಂಗ್ ಬೆಳಗಾವಿಯ ಬಿಮ್ಸ್ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ.

‘ನಮ್ಮ ಮಾತೃಭಾಷೆ ಹಿಂದಿ. ಆದರೆ, ಹುಬ್ಬಳ್ಳಿಯಲ್ಲಿ ಹಲವು ವರ್ಷ ಇದ್ದುದರಿಂದ ಕನ್ನಡ ಸಹ ಬರುತ್ತದೆ’ ಎಂದು ಇಶಿಕಾ ಸಿಂಗ್ ಹೇಳಿದರು.

ಇಶಿಕಾ ಚಿಕ್ಕಿಂದಿನಿಂದಲೂ ಓದಿನಲ್ಲಿ ಸದಾ ಮುಂದೆ ಇರುತ್ತಿದ್ದಳು. ಈಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ
ರಾಜೇಶಕುಮಾರ್ ಸಿಂಗ್ ಇಶಿಕಾ ಸಿಂಗ್ ತಂದೆ

‘ಫೇಸ್ಬುಕ್ ಇನ್ಸ್ಟಾಗ್ರಾಂ ಬಳಸಲ್ಲ’

‘ನಾನು ಇನ್ಸ್ಟಾಗ್ರಾಂ ಫೇಸ್ಬುಕ್ ಬಳಸುವುದಿಲ್ಲ. ಸ್ನೇಹಿತರು ಪೋಷಕರ ಜತೆ ಸಂವಹನಕ್ಕೆ ಮಾತ್ರ ವಾಟ್ಸ್ಆ್ಯಪ್ ಮತ್ತು ಯುಪಿಎಸ್ಸಿ ಸಿದ್ಧತೆ ಸಲುವಾಗಿ ಮಾತ್ರ ಟೆಲಿಗ್ರಾಂ ಆ್ಯಪ್ ಬಳಸುತ್ತಿದ್ದೆ’ ಎಂದು ಇಶಿಕಾ ಸಿಂಗ್ ಹೇಳಿದರು. ‘ನನಗೆ ಓದುವುದರಲ್ಲಿ ತುಂಬಾ ಆಸಕ್ತಿ ಇದೆ. ಥ್ರಿಲ್ಲರ್ ಸೈಕಾಲಾಜಿಕಲ್ ಕಾದಂಬರಿಗಳನ್ನು ಹೆಚ್ಚು ಓದುತ್ತೇನೆ. ಸ್ನೇಹಿತರು ಪೋಷಕರ ಜತೆ ಸಮಯ ಕಳೆಯುವುದು ಇಷ್ಟ’ ಎಂದರು. ‘ಎಂಬಿಬಿಎಸ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಮ್ಮ ಮನೆಯವರ ಪ್ರೋತ್ಸಾಹ ತುಂಬಾ ಇದೆ. ಪ್ರತಿ ಹಂತದಲ್ಲೂ ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.