ಬುಧವಾರ, ಡಿಸೆಂಬರ್ 2, 2020
25 °C

ವೀರಶೈವ ಲಿಂಗಾಯತರು ಸಬಲರಾಗಬೇಕು: ಪ್ರಕಾಶ ಬೆಂಡಿಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ರಾಜ್ಯದಲ್ಲೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮಾಜ ಮತ್ತಷ್ಟು ಸಬಲೀಕರಣಗೊಳ್ಳಬೇಕಿದೆ’ ಎಂದು ವೀರಶೈವ ಲಿಂಗಾಯತ ಸಂಘಟನೆಯ ಪ್ರಕಾಶ ಬೆಂಡಿಗೇರಿ ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಸಬಲೀಕರಣ ಹಾಗೂ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯಗಳ ಕುರಿತು ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘‌ಸರಿಯಾದ ಸಂಘಟನೆ ಹಾಗೂ ಹೋರಾಟದ ಕೊರತೆಯಿಂದಾಗಿ, 100ಕ್ಕೂ ಅಧಿಕ ಉಪ ಜಾತಿಗಳನ್ನೊಳಗೊಂಡ ಸಮಾಜದ ಬೆಳವಣಿಗೆ ಕುಂಠಿತವಾಗಿದೆ’ ಎಂದರು.

‘ಸಮಾಜದ ಸರ್ವರನ್ನೂ ಸಂಘಟಿಸುವ ಮೂಲಕ, ನಮ್ಮ ಹಕ್ಕನ್ನು ಪಡೆಯಲು ಹೋರಾಡಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ, ಸಂಘಟನೆಯು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಮೂಲಕ, ಸಬಲೀಕರಣಕ್ಕಾಗಿ ಶ್ರಮಿಸಬೇಕಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಧರ್ಮ, ಸಾಮಾಜಿಕ, ಶೈಕ್ಷಣಿಕ, ವ್ಯಾಪಾರ, ರಾಜಕೀಯ, ಕೃಷಿ, ಸಂಘಟನೆಗೆ ಸಂಬಂಧಿಸಿದ ವಿಷಯಗಳ ಕುರಿತು  ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಬಸವರಾಜ ಚನ್ನೋಜಿ, ಬಸವರಾಜ ಸುಳ್ಳದ, ನಿರ್ಮಲಾ ಹಿರೇಮಠ, ತಾರಾದೇವಿ ವಾಲಿ, ಗುರುಶಿದ್ಧ, ಸಂಶಿ, ಮಲ್ಲಿಕಾರ್ಜುನ ಸಂಶಿಮಠ, ಮಹಾಂತೆಶ ಗಿರಿಮಠ, ಪ್ರಭುರಾಜ ನವಲಗುಂದ ಮಠ, ನಿರಂಜನ ಹಿರೇಮಠ ಹಾಗೂ ರಾಜು ಓದನ್ನವರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು