ಕಲ್ಲಿನಿಂದ ಕೂಡಿದ್ದ ಗುಡ್ಡ ಪ್ರದೇಶದಲ್ಲಿ ಕೃಷಿ ಮಾಡಿ ಯಶ ಕಂಡವರು ಹುಬ್ಬಳ್ಳಿಯ ಡಿ.ಟಿ. ಪಾಟೀಲರು. 78ರ ಇಳಿವಯಸ್ಸಿನಲ್ಲೂ ಕೃಷಿ ಮೇಲಿನ ಅವರ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಹುಬ್ಬಳ್ಳಿಯಿಂದ 8 ಕಿ.ಮೀ. ದೂರದಲ್ಲಿರುವ ಮಾವನೂರಿನ 14 ಎಕರೆ ಗುಡ್ಡ ಪ್ರದೇಶ, ಇವರ ಕೃಷಿ ತಪಸ್ಸಿನ ಕೇಂದ್ರವಾಗಿದೆ. ಹುಬ್ಬಳ್ಳಿಯ ವಿವಿಧೆಡೆ ಇವರು ತಮ್ಮ ಜಮೀನಿನಲ್ಲಿ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿದ್ದರೂ, ಮಾವನೂರಿನ ಗುಡ್ಡದಲ್ಲಿ ಮಾಡಿರುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.