ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಡಿಯೊ ಸುದ್ದಿ: ಮಳೆ ಸುರಿಯುವಾಗ ಕೈಯಲ್ಲಿ ಛತ್ರಿ ಹಿಡಿದು ಚಾಲಕ ಬಸ್‌ ಚಾಲನೆ...

Published 24 ಮೇ 2024, 14:50 IST
Last Updated 24 ಮೇ 2024, 14:50 IST
ಅಕ್ಷರ ಗಾತ್ರ

ಧಾರವಾಡ: ಮಳೆ ಸುರಿಯುವಾಗ, ಒಂದು ಕೈಯಲ್ಲಿ ಛತ್ರಿ ಹಿಡಿದು ಮತ್ತೊಂದು ಕೈಯಲ್ಲಿ ಸ್ಟೀರಿಂಗ್‌ ಹಿಡಿದು, ವಾಯವ್ಯ ಕರ್ನಾಟಕ ಸಾರಿಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಚಾಲಕ ಹನುಮಂತಪ್ಪ ಅ. ಕಿಲ್ಲೇದಾರ ಅವರು ಬಸ್‌ ಚಾಲನೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಗುರುವಾರ ಮಧ್ಯಾಹ್ನ 4.30ರ ವೇಳೆಯಲ್ಲಿ ಮಳೆ ಸುರಿಯುವಾಗ ವಿಡಿಯೊ ಮಾಡಿದ್ದಾರೆ. ಉಪ್ಪಿನಬೆಟಗೇರಿಯಿಂದ ಧಾರವಾಡ ಕಡೆಗೆ ಬಸ್‌ ಸಂಚರಿಸುವಾಗ ಚಾಲಕ ಕೈಯಲ್ಲಿ ಕೊಡೆ ಹಿಡಿದು ಚಾಲನೆ ಮಾಡಿದ್ಧಾರೆ.

ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ. ನಿರ್ವಾಹಕಿ ಅನಿತಾ ಎಚ್‌.ಬಿ.ಅವರು ಮೊಬೈಲ್‌ ಫೋನ್‌ ವಿಡಿಯೊ ಮಾಡಿದ್ಧಾರೆ. ಮನರಂಜನೆಗಾಗಿ ಮಳೆ ಸುರಿಯುವಾಗ ಛತ್ರಿ ಹಿಡಿದು ಬಸ್‌ ಚಾಲನೆ ಮಾಡಿದೆ ಎಂದು ಚಾಲಕ ವಿವರಣೆ ನೀಡಿದ್ದಾರೆ’ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಯಾಂಗಾ ಸ್ಪಷ್ಟನೆ ನೀಡಿದ್ದಾರೆ.

‘ಬಸ್‌ನಲ್ಲಿ ಚಾಲಕನ ಆಸನ ಭಾಗ ಮತ್ತು ಪ್ರಯಾಣಿಕರ ಆಸನ ಭಾಗದಲ್ಲಿ ಎಲ್ಲಿಯೂ ಸೋರಿಕೆಯಾಗುತ್ತಿರಲಿಲ್ಲ. ವಾಹನವನ್ನು ತಾಂತ್ರಿಕ ವಿಭಾಗದವರು ಪರಿಶೀಲನೆ ಮಾಡಿದ್ಧಾರೆ. ಬಸ್‌ ಸೋರುತ್ತಿರಲಿಲ್ಲ ಎಂದು ಖಚಿತಪಡಿಸಿದ್ದಾರೆ’ ಎಂದು ತಿಳಿಸಿದ್ಧಾರೆ.

ವಿಡಿಯೊದಲ್ಲಿ ಚಾಲಕ ಮತ್ತು ನಿರ್ವಾಹಕಿ ಸಂಭಾಷಣೆ ಇಂತಿದೆ...

ಚಾಲಕ: ಮುಂದೆ ಏನು ರಸ್ತೆನೆ ಕಾಣವಲ್ಲದು

ನಿರ್ವಾಹಕಿ: ಮುಂದೆ ಗಾಡಿ ಬರುತ್ತಿವೆ ನೋಡು, ಹಿಡಿದುಕೊಳ್ಳಲೆ ಛತ್ರಿನಾ

ಚಾಲಕ: ಮೊಬೈಲ್‌ ಹಿಡ್ಕೊ ಸಾಕು

ನಿರ್ವಾಹಕಿ: ಮೊಬೈಲ್‌ ಹಿಡಿದುಕೊಂಡು ಈಗ ಎಲ್ಲರಿಗೂ ಶೇರ್‌ ಮಾಡಲು ಗ್ರೂಪ್‌ಗೆ ಬಿಟ್ಟುಬಿಡೋದು, ಹೀಗು ಉಂಟಾ ಛತ್ರಿ ಹಿಡಿದು ಗಾಡಿ ಓಡ್ಸೋದು...

ಚಾಲಕ: ನೋಡು ಇಲ್ಲಿ ತೊಯುದೆಲ್ಲಾ

ನಿರ್ವಾಹಕಿ: ಆ ಗ್ಲಾಸ್‌ ಹಾಕಬೇಕಿಲ್ಲೊ

ಚಾಲಕ: ಗ್ಲಾಸ್‌ ಹಾಕಿದರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT