ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ಸುರಕ್ಷತೆಗೆ ‘ವಿಎಸ್‌ಎಸ್‌’ ಕಣ್ಗಾವಲು

Last Updated 6 ಜುಲೈ 2021, 17:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆಗೆ ಒತ್ತು ಕೊಡಲು ರೈಲ್ವೆ ಇಲಾಖೆ ಪ್ರಮುಖ ನಿಲ್ದಾಣಗಳಲ್ಲಿ ವಿಡಿಯೊ ಆಧರಿತ ಕಣ್ಗಾವಲು ಪದ್ಧತಿ (ವಿಎಸ್‌ಎಸ್‌) ಜಾರಿಗೆ ತಂದಿದೆ.

ಭಾರತೀಯ ರೈಲ್ವೆ ಮತ್ತು ರೈಲ್‌ಟೈಲ್‌ ಜಂಟಿಯಾಗಿ ವಿಡಿಯೊ ದಾಖಲೀಕರಣ ವ್ಯವಸ್ಥೆ ಮಾಡುತ್ತಿದ್ದು, ಭಾರತದ 813 ಪ್ರಮುಖ ರೈಲು ನಿಲ್ದಾಣಗಳಲ್ಲಿ ಐಪಿ ಆಧರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತದೆ. ಕಾರ್ಯ ಪ್ರಗತಿಯಲ್ಲಿದ್ದು 2022ರ ಮಾರ್ಚ್‌ ಅಂತ್ಯದ ವೇಳೆಗೆ 756 ನಿಲ್ದಾಣಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ಪ್ರಮುಖ ನಿಲ್ದಾಣಗಳಲ್ಲಿ ಹುಬ್ಬಳ್ಳಿ ವಿಭಾಗೀಯ ವ್ಯಾಪ್ತಿಯ ಹುಬ್ಬಳ್ಳಿ, ವಾಸ್ಕೋಡಗಾಮ, ಹೊಸಪೇಟೆ, ಬೆಳಗಾವಿ ಮತ್ತು ಬಳ್ಳಾರಿ ನಿಲ್ದಾಣಗಳು ಕೂಡ ಸೇರಿವೆ. ಗದಗ ಹಾಗೂ ವಿಜಯಪುರ ನಿಲ್ದಾಣಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಇದಕ್ಕಾಗಿ ಒಟ್ಟು ₹8.17 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಡೆಮಿ, ಬುಲೆಟ್‌, ಪಾನ್‌ ಟಿಲ್ಟ್‌ ಜೂಮ್‌ ವಿಧಾನ ಮತ್ತು ಅಲ್ಟ್ರಾ ಎಚ್‌ಡಿ–4ಕೆ ಹೀಗೆ ನಾಲ್ಕು ವಿಭಿನ್ನ ಬಗೆಯ ಐಪಿ ಕ್ಯಾಮೆರಾಗಳು ವಿವಿಧ ಕೋನಗಳಿಂದ ವಿಡಿಯೊವನ್ನು ಸೆರೆ ಹಿಡಿಯುತ್ತವೆ. ಕ್ಯಾಮೆರಾಗಳು ದಾಖಲಿಸಿಕೊಂಡ ವಿಡಿಯೊಗಳನ್ನು ಇಂಟಿಗ್ರೇಟೆಡ್‌ ಕಮಾಂಡ್‌ ಕೇಂದ್ರಗಳನ್ನು ರವಾನಿಸುತ್ತವೆ. ಅಲ್ಲಿ ವಿಡಿಯೊ ತುಣುಕುಗಳು ದಾಖಲೆಯಾಗಿ ಉಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT