ಹುಬ್ಬಳ್ಳಿ: ತಿರುಪತಿ- ಕೊಲ್ಹಾಪುರ ಮಧ್ಯೆ ಓಡಾಡುವ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲಿಗೆ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಎರಡು ದ್ವಿತೀಯ ದರ್ಜೆ ಸ್ಲೀಪರ್ ಬೋಗಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗು ವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ತಿರುಪತಿಯಿಂದ ಹೊರಡುವ ರೈಲಿಗೆ ಜೂನ್ 16ರಿಂದಲೇ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದ್ದು ಈ ತಿಂಗಳ 30ರವರೆಗೆ ಹಾಗೂ ಕೊಲ್ಹಾಪುರದಿಂದ ಹೊರಡುವ ರೈಲುಗಳಿಗೆ 18ರಿಂದ ಅಳವಡಿಸಲಾಗಿದ್ದು ಜುಲೈ 2ರವರೆಗೆ ಮುಂದುವರಿಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೌರಾ-ಯಶವಂತಪುರ ಮಧ್ಯೆ ಸಂಚರಿಸುವ ತುರಂತೊ ಎಕ್ಸ್ಪ್ರೆಸ್ ರೈಲಿನಲ್ಲಿ ಒಂದು ಎಸಿ -3 ಟಯರ್ ಬೋಗಿ ಅಳವಡಿಸಲಾಗುವುದು.

ಹೌರಾದಿಂದ ಇದೇ 19, 23 ಮತ್ತು 28ರಂದು ಹೊರಡುವ ಹಾಗೂ ಇದೇ 21, 25, 30ರಂದು ಯಶವಂತಪುರದಿಂದ ಹೊರಡುವ ರೈಲಿಗೆ ಹೆಚ್ಚು ವರಿ ಬೋಗಿ ಸೇರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.