ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧೋನ್ಮಾದದ ಭಾವನೆ ವಿಜೃಂಭಣೆ: ವಿಷಾದ

‘ಯುದ್ಧ ಬಂತು ಮನೆಯವರೆಗೆ’ ನಾಟಕ ಪ್ರದರ್ಶನ
Last Updated 9 ಡಿಸೆಂಬರ್ 2019, 11:26 IST
ಅಕ್ಷರ ಗಾತ್ರ

ಸಾಗರ: ಪ್ರಸ್ತುತ ದಿನಗಳಲ್ಲಿ ಎಲ್ಲೆಡೆ ಯುದ್ಧೋನ್ಮಾದದ ಭಾವನೆ ವಿಜೃಂಭಿಸುತ್ತಿರುವುದು ಕಾಣುತ್ತಿದೆ. ಹಿಂಸೆಯ ಬದಲಾಗಿ ಶಾಂತಿ, ಪ್ರೀತಿ, ಸಹನೆಯಂತಹ ಗುಣಗಳೇ ಸಮಾಜವನ್ನು ಕಾಯಬಲ್ಲದು ಎಂಬ ಸಂಗತಿಯನ್ನು ಸಾರುವ ಜವಾಬ್ದಾರಿ ಎಲ್ಲಾ ಕಲಾ ಪ್ರಕಾರಗಳ ಮೇಲೆ ಇದೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹೇಳಿದರು.

ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಸ್ಪಂದನ ರಂಗತಂಡ ಶನಿವಾರ ಆಯೋಜಿಸಿದ್ದ ‘ಯುದ್ಧ ಬಂತು ಮನೆಯವರೆಗೆ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎರಡು ದೇಶಗಳ ನಡುವೆ ಗಡಿಯಲ್ಲಿ ನಡೆಯುವ ಯುದ್ಧವನ್ನು ಮಾತ್ರ ನಾವು ಈವರೆಗೆ ಯುದ್ಧ ಎಂದು ಪರಿಗಣಿಸಿದ್ದೇವೆ. ಆದರೆ ಬದಲಾದ ಕಾಲಘಟ್ಟದಲ್ಲಿ ಯುದ್ಧ ಎನ್ನುವುದು ಹಲವು ರೂಪಗಳನ್ನು ಧರಿಸಿ ಸಮಾಜದಲ್ಲಿ ವಿಚಿತ್ರವಾದ ವಿಷಾದ ಮತ್ತು ತಲ್ಲಣಗಳನ್ನು ಸೃಷ್ಟಿಸಿದೆ.ಮನುಷ್ಯನ ಬಹಿರಂಗದಲ್ಲಿ ನಡೆಯುವ ಯುದ್ಧದ ಜೊತೆಗೆ ಅಂತರಂಗದಲ್ಲಿ ನಡೆಯುವ ಯುದ್ಧ ಕೂಡ ಭೀಕರವಾದದ್ದು’ ಎಂದರು.

ನಾಟಕ ಪ್ರದರ್ಶನಕ್ಕೆ ಶಾಸಕ ಎಚ್. ಹಾಲಪ್ಪ ಹರತಾಳು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು. ಅನುವಾದಕ ಡಾ.ಎಂ.ಜಿ. ಹೆಗಡೆ, ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಇದ್ದರು.

ನಂತರ ಸ್ಪಂದನ ರಂಗತಂಡದವರು ಡಾ.ಶ್ರೀಪಾದ ಭಟ್ ಅವರ ನಿರ್ದೇಶನ ದಲ್ಲಿ ‘ಯುದ್ಧ ಬಂತು ಮನೆಯವರೆಗೆ’ ನಾಟಕವನ್ನು ಪ್ರದರ್ಶಿಸಿದರು.

ರಂಗದ ಮೇಲೆ ನಾಗೇಂದ್ರ ಎಸ್. ಕುಮಟಾ, ಗುರುಮೂರ್ತಿ ವರದಾಮೂಲ, ಪ್ರಸನ್ನಕುಮಾರ್ ಎನ್.ಎಂ., ಶಿವಕುಮಾರ್ ಉಳವಿ, ಹರ್ಷ ಉಳ್ಳೂರು, ವಿಜಯಶ್ರೀ, ಬಿ.ಎಸ್. ರಾಜೇಶ್ವರಿ ಕೊಡಗು, ಸಮಾ ನಿಹಾರಿಕ ಚಿಪ್ಳಿ, ಎಂ.ವಿ. ಪ್ರತಿಭಾ, ಶ್ರೇಯಾಂಕ್ ಎನ್. ಕುಮಟಾ, ವಿವೇಕ್ ನಾಯಕ್ ಬಿ.ಎಂ. ಅಭಿನಯಿಸಿದ್ದರು. ಸತೀಶ್ ಶೆಣೈ ಬೆಳಕಿನ ಸಂಯೋಜನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT