ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಗಳು ಶೇ 99ರಷ್ಟು ಅನುಷ್ಟಾನ: ಎಚ್‌.ಕೆ.ಪಾಟೀಲ

Published 5 ಮೇ 2024, 16:05 IST
Last Updated 5 ಮೇ 2024, 16:05 IST
ಅಕ್ಷರ ಗಾತ್ರ

ಗದಗ: ‘ದೇಶದಲ್ಲಿ ಜನರ ನಾಡಿಮಿಡಿತ ಅರ್ಥಮಾಡಿಕೊಂಡು ಪ್ರತಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಶೇ 99ರಷ್ಟು ಅನುಷ್ಟಾನಗೊಂಡಿವೆ. ಒಂದು ಕೋಟಿ ಹತ್ತು ಲಕ್ಷ ಬಡ ಕುಟುಂಬದ ಕಷ್ಟ ನೀಗಿದಂತಾಗಿದೆ. ಈ ಚುನಾವಣೆಯಲ್ಲಿ ಒಕ್ಕೂರಲಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಸಚಿವ ಎಚ್‌.ಕೆ.ಪಾಟೀಲ ಮನವಿ ಮಾಡಿದರು.

ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಪರವಾಗಿ ಮತಯಾಚಿಸಿ ಮಾತನಾಡಿದರು.

ಆನಂದಸ್ವಾಮಿ ಗಡ್ಡದ್ದೇವರಮಠ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದರು.

ಕಾಂಗ್ರೆಸ್‌ ಮುಖಂಡರಾದ ಅಪ್ಪಣ್ಣ ಇನಾಮತಿ, ಗಿರೀಶ ಡಬಾಲಿ, ಶೇಖರಯ್ಯ ಹೊಸಮಠ, ಯಲ್ಲಪ್ಪ ಹೊಸಮನಿ, ವಿರುಪಣ್ಣ ಹೊಸಮನಿ, ಮುಕ್ತಾರ್‌ ಮೌಲ್ವಿ, ಬಸವರಾಜ ಬಂದಕ್ಕನವರ, ಶರಣಬಸನಗೌಡ ಪಾಟೀಲ, ಅಶೋಕ ಶಿರಹಟ್ಟಿ, ಬರಮಪ್ಪ ಹುಣಸಿಮರದ, ಕುಬಣ್ಣ ಬಂಗಾರಿ, ಟಿ.ಬಿ. ಸೋಮರಡ್ಡಿ, ಬಾಪು ಕಿಲ್ಲೇದಾರ, ಮಲ್ಲಪ್ಪ ದಂಡಿನ ಉಪಸ್ಥಿತರಿದ್ದರು.

ಇದೇ ವೇಳೆ ಬಿಜೆಪಿ ಪಕ್ಷ ತೊರೆದು ಕಲ್ಲೂರ ಗ್ರಾಮದ ಪ್ರಭು ರಾಮಗೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT