ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ | ಎಂಜಿನಿಯರಿಂಗ್‌ ಕೋರ್ಸ್‌: ಪ್ರವೇಶ ಆರಂಭ

Published 15 ಮೇ 2024, 15:46 IST
Last Updated 15 ಮೇ 2024, 15:46 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 2024 –25ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಎಂಜಿನಿಯರಿಂಗ್‌ ಕೋರ್ಸುಗಳಿಗೆ ಮೆರಿಟ್‌ ಆಧಾರಿತ ಪ್ರವೇಶಾತಿ ಪ್ರಾರಂಭವಾಗಿದೆ.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಸುಸಜ್ಜಿತ ಕಟ್ಟಡ, ಆಧುನಿಕ ಪ್ರಯೋಗಾಲಯ ಹೊಂದಿದ್ದು, 2007ರಿಂದ ಉತ್ತಮ ಫಲಿತಾಂಶ ದಾಖಲಿಸುತ್ತ ಬಂದಿದೆ. 2024 –25ನೇ ಸಾಲಿನ ಪ್ರಥಮ ಸೆಮಿಸ್ಟರ್‌ಗೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮೇ 14ರ ವರೆಗೆ ಪ್ರಥಮ ಹಂತ, ಮೇ 17ರಿಂದ ಮೇ 21ರ ವರೆಗೆ ದ್ವಿತೀಯ ಹಂತ, ಮೇ 22 ರಿಂದ ಮೇ 25ರ ವರೆಗೆ ತೃತೀಯ ಹಂತ ಮತ್ತು ಮೇ 27 ರಿಂದ ಮೇ 30ರ ವರೆಗೆ ತಮ್ಮ ಎಲ್ಲ ಮೂಲ ದಾಖಲೆಗಳೊಂದಿಗೆ ಸಂಸ್ಥೆಗೆ ಖುದ್ದಾಗಿ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ.

ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಶನ್‌, ಸಿವಿಲ್‌, ಮೆಕ್ಯಾನಿಕ್‌, ಅಟೋಮೊಬೈಲ್‌ ವಿಭಾಗಗಳಿದ್ದು, ವಿದ್ಯಾರ್ಥಿನಿಯರಿಗೆ (ಬಿ.ಸಿ.ಎಂ ಎಸ್.ಸಿ, ಎಸ್‌.ಟಿ) ವಸತಿ ಸೌಲಭ್ಯ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಗಳಿವೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT