ಮುಂಡರಗಿ: ಬಡ ಹಾಗೂ ನಿರ್ಗತಿಕ ಜನತೆಗೆ ಆಶ್ರಯ ಮನೆಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿ ಕಿಸಾನ ಜಾಗೃತಿ ವಿಕಾಸ ಸಂಘದ ನೇತೃತ್ವದಲ್ಲಿ ಪಟ್ಟಣದ ಬಡ ಜನರು ಸೋಮವಾರ ಆಶ್ರಯ ಮನೆ ನಿರ್ಮಿಸಲು ಪುರಸಭೆಯು ಪಟ್ಟಣದ ಹೊರವಲಯದಲ್ಲಿ ಖರೀದಿಸಿರುವ ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.

‘ಕಳೆದ ಹಲವು ದಶಕಗಳಿಂದ ಪಟ್ಟಣದ ಬಡ ಜನತೆ ಆಶ್ರಯ ಮನೆಗಳಿಲ್ಲದೆ ಪರದಾಡುತ್ತಿದ್ದು, ಅವರಿಗೆ ಮನೆ ನೀಡುವಲ್ಲಿ ಪುರಸಭೆ ಹಾಗೂ ವಿವಿಧ ಹಂತಗಳ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ತಕ್ಷಣ ಪುರಸಭೆಯವರು ಬಡ ಜನತೆಗೆ ಮನೆಗಳನ್ನು ವಿತರಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ವಾಸಿಸಲು ಮನೆಗಳಿಲ್ಲದ್ದರಿಂದ ಇಲ್ಲಿಯ ಸಾವಿರಾರು ಬಡ ಕುಟುಂಬಗಳು ಸಣ್ಣ ಗುಡಿಸಲು ಹಾಗೂ ಶಡ್ಡುಗಳಲ್ಲಿ ವಾಸಿಸುತ್ತಿದ್ದಾರೆ. ಬಡವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡುವುದರ ಸಲುವಾಗಿ 10–12 ವರ್ಷಗಳ ಹಿಂದೆ ಪಟ್ಟಣದ ಹೊರವಲಯದಲ್ಲಿ 25 ಎಕರೆ ಜಮೀನು ಖರೀದಿಸಲಾಗಿದ್ದು, ಅಲ್ಲಿ 1,008 ನಿವೇಶನಗಳನ್ನು ತಯಾರಿಸಲಾಗಿದೆ. ಆದರೆ ಈವರೆಗೂ ಮನೆಗಳನ್ನು ನಿರ್ಮಿಸದಿರುವುದರಿಂದ ಬಡವರು ಬೀದಿಯಲ್ಲಿ ಬದುಕುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸುಮಾರು 30 ವರ್ಷಗಳಿಂದ ಪಟ್ಟಣದ ಬಡ ಜನತೆಗೆ ಮನೆಗಳನ್ನು ವಿತರಿಸಿಲ್ಲ. ಮನೆ ವಿತರಿಸುವ ಸಲುವಾಗಿ ಪುರಸಭೆಯವರು ಹಲವು ಬಾರಿ ಬಡ ಜನರಿಂದ ಅರ್ಜಿ ಪಡೆದುಕೊಂಡಿದ್ದು, ಈವರೆಗೂ ಯಾರಿಗೂ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ಮನೆ ವಿತರಿಸುವ ಕುರಿತಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಡ ಜನತೆಯನ್ನು ವಿನಾಕಾರಣ ಸತಾಯಿಸುತ್ತಿದ್ದಾರೆ’ ಎಂದು ದೂರಿದರು.

‘ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಈಗಾಗಲೇ ಬಡ ಜನರು ಹಲವಾರು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಶಾಸಕ ಮೊದಲಾದವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಪುರಸಭೆಯವರು ಮನೆಗಳನ್ನು ವಿತರಿಸದೆ ಸತಾಯಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಶ್ರಯ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಡಾ.ಚಂದ್ರು ಲಮಾಣಿ ಅವರು ಈ ಕುರಿತು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಿರಂತರವಾಗಿ ನಡೆಯಲಿದೆ’ ಎಂದು ಎಚ್ಚರಿಸಿದರು.

ಕಿಸಾನ್ ಜಾಗೃತಿ ವಿಕಾಸ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಭಂಡಾರಿ, ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಸ್.ಗಟ್ಟಿ, ಮುಖಂಡರಾದ ಅಶೋಕ ಹೊಸಮನಿ, ಮುದಿಯಪ್ಪ ಲಕ್ಕುಂಡಿ, ಯಮನೂರಪ್ಪ ಹಂಚಿನಾಳ, ಅಶೋಕ ಹೊಸಮನಿ, ಅಶ್ವಿನಿ ಟಗರು, ವಿಜಯಲಕ್ಷ್ಮಿ ಬಡಿಗೇರ, ಸತ್ಯಾ ಆಚಾರ್ಯ, ಸುರೇಶ ಪೂಜಾರ, ಗಂಗಮ್ಮ ಪೂಜಾರ, ಸುಂಕಮ್ಮ ಕೊರವರ, ಈರಮ್ಮ ಪೂಜಾರಿ, ಜಯಮಾಲವ್ವ ಬುಡಗಜಂಗಮ, ಯಲ್ಲಮ್ಮ ಮಾಂತು, ಮಹಮ್ಮರಫಿ ವಡ್ಡಟ್ಟಿ, ನಜೀರ ಬೇವೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.