ಮುಂಡರಗಿ: ‘ಕರ್ನಾಟಕವು ದೇಶದ ವೈವಿಧ್ಯಮಯ ಕಲೆಗಳ ತವರೂರಾಗಿದೆ. ಸರ್ಕಾರ ಬೃಹತ್ ಬೆಂಗಳೂರು ನಿರ್ಮಿಸುವ ಬದಲು ಬೃಹತ್ ಕರ್ನಾಟಕ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯ ಬಿ.ಜಿ. ಜವಳಿ ಹೇಳಿದರು.

ಸ್ಥಳೀಯ ಕ.ರಾ. ಬೆಲ್ಲದ ಪದವಿ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ನಾಡು, ನುಡಿ ಕುರಿತ ನೃತ್ಯ ಸ್ಪರ್ಧೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ‘ಯುವಕರು ದೇಶಿ ಮನೋರಂಜನೆಗೆ ಒತ್ತು ನೀಡಬೇಕು’ ಎಂದರು.

ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸ್ಪಾಟೀಲ, ಉಪನ್ಯಾಸಕಿ ಕಾವೇರಿ ಬೋಲಾ ಹಾಗೂ ಕಸಾಪ ಧಾರವಾಡ ಘಟಕ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿದರು.

ನಂದಿತಾ ಟೆಂಕದ ಸ್ವಾಗತಿಸಿದರು. ಪ್ರಾಚಾರ್ಯ ಸಂತೋಷ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮಿ ಕನಕಪ್ಪನವರ ನಿರೂಪಿಸಿದರು. ಈರಮ್ಮ ಬಂಡಿವಡ್ಡರ ವಂದಿಸಿದರು. ವಿ.ಎಫ್. ಗುಡದಪ್ಪನವರ, ಟಿ.ಬಿ. ದಂಡಿನ, ಅಮರೇಶ ಶಿವಶೆಟ್ಟರ್, ಶೌಕತ್ ಅಲಿ, ಸುರೇಶ ನ್ಯಾಮತಿ, ಕುಮಾರ.ಜೆ, ವನಜಾಕ್ಷಿ ಭರಮಗೌಡರ, ಆರ್.ಎಚ್. ಜಂಗಣವಾರಿ, ಸಚಿನ್ ಉಪ್ಪಾರ, ಮನೋಜ ಕೋರ್ಪಡೆ ಇದ್ದರು.

ನೃತ್ಯ ಸ್ಪರ್ಧೆಯ ಫಲಿತಾಂಶ: ತನಿಷಾ, ಮಾನಸಾ ಆಚಾರ್ಯ ಅವರ ತಂಡ ಪ್ರಥಮ, ಕರಿಷ್ಮಾ ಗದಗ, ಹಮ್ಮಿಗಿಮಠ ಅವರ ತಂಡ ದ್ವಿತೀಯ ಹಾಗೂ ಶಿವು ಹಳ್ಳಿ , ಆದಿತ್ಯಾ ಇಟಗಿ ಅವರ ತಂಡ ತೃತೀಯ ಸ್ಥಾನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.