ಮುಂಡರಗಿ: ‘ಎಸ್.ಸಿ. ಮತ್ತು ಎಸ್.ಟಿ. ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸರ್ಕಾರ ಜಾತಿಗಣತಿಯನ್ನು ಮಾಡುತ್ತಿದ್ದು, ಜಾತಿ ಗಣತಿಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರು ಜಾತಿ ಕಾಲಂ 61ರಲ್ಲಿ ಕಡ್ಡಾಯವಾಗಿ ಮಾದಿಗ ಎಂದು ನಮೂದಿಸಬೇಕು’ ಎಂದು ಮಾದಿಗ ಸಮಾಜದ ಮುಖಂಡ ಮರಿಯಪ್ಪ ಸಿದ್ದಣ್ಣವರ ಮನವಿ ಮಾಡಿಕೊಂಡರು.

ತಾಲ್ಲೂಕಿನ ಡಂಬಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ನಗರದಲ್ಲಿ ಮಾದಿಗ ಸಮುದಾಯವು ಬುಧವಾರ ಹಮ್ಮಿಕೊಂಡಿದ್ದ ಭಿತ್ತಿಪತ್ರ ಬಿಡುಗಡೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಣತಿಗೆ ನಿಯೋಜನೆ ಮಾಡಿರುವ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಕುಟುಂಬದ ಅಗತ್ಯ ಮಾಹಿತಿ ಪಡೆಯಬೇಕು. ಆ ಮೂಲಕ ಪಾರದರ್ಶಕವಾಗಿ ಜಾತಿ ಗಣತಿ ಮಾಡಬೇಕು. ಕೆಲವು ಮೇಲ್ವರ್ಗದವರು ನಾವು ಪರಿಶಿಷ್ಠ ಸಮುದಾಯಕ್ಕೆ ಸೇರಿದವರು ಎಂದು ಸುಳ್ಳು ಮಾಹಿತಿ ನೀಡುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಯುವ ಮುಖಂಡ ಮಲ್ಲಿಕಾರ್ಜುನ ಗೌಡಣ್ಣವರ ಮಾತನಾಡಿ, ಸರ್ಕಾರ ಜಾತಿ ಗಣತಿಯನ್ನು ಪಾರದರ್ಶಕವಾಗಿ ಮಾಡಿಸಬೇಕು. ರಾಜ್ಯದ ಪರಿಶಿಷ್ಠ ಸಮುದಾಯದ ಪ್ರತಿಯೊಂದು ಕುಟುಂಬವೂ ಗಣತಿಯಿಂದ ವಂಚಿತರಾಗದಂತೆ ಅಗತ್ಯ ಕ್ರಮ ತಗೆದುಕೊಳ್ಳಬೇಕು. ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿರುವ ದಂಪತಿಗಳ ಅಥವಾ ಕುಟುಂಬಗಳ ಆಧಾರ್ ಕಾರ್ಡ್ ಅಥವಾ ಅದಕ್ಕೆ ಪೂರಕವಾದ ದಾಖಲೆಗಳನ್ನು ಪಡೆದು ಗಣತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಮುಖಂಡರಾದ ನಿಂಗಪ್ಪ ಮಾದರ, ದುರಗಪ್ಪ ಗೋವಿನಕೊಪ್ಪ, ಅಶೋಕ ತಳಗೇರಿ, ಗುಡದಪ್ಪ ತಳಗೇರಿ, ಭೀಮಪ್ಪ ತಳಗೇರಿ, ಲಕ್ಷ್ಮಣ ಭೇಟಗೇರಿ, ಮುತ್ತಪ್ಪ ಪೂಜಾರ, ಮರಿಯಪ್ಪ ದೊಡ್ಡಮನಿ, ಸುರೇಶ ವಡ್ಡಟ್ಟಿ, ಮಲ್ಲಪ್ಪ ಹಳ್ಳಿಕೇರಿ, ಬಸಪ್ಪ ವಗ್ಗರಣಿ, ಸುರೇಶ ಪೂಜಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.