ಲಕ್ಕುಂಡಿ: ‘ಮಕ್ಕಳು ಮೊಬೈಲ್ ಮತ್ತು ಟಿ.ವಿಯಿಂದ ದೂರ ಇರಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಪೂಜಾರ ಹೇಳಿದರು.

ಇಲ್ಲಿಯ ಕನಕದಾಸ ಶಿಕ್ಷಣ ಸಂಸ್ಥೆಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವೀಂದ್ರನಾಥ ದಂಡಿನ ಮಾತನಾಡಿ, ‘ಸಮಾಜಕ್ಕೆ ಅಧ್ಯಾತ್ಮದ ಸಲಹೆ ನೀಡುತ್ತಿರುವ ಗ್ರಾಮದ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು ಹಾಗೂ ಮನೆಯ ತಳಪಾಯ ತೆಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಕೊಟ್ಟು ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ ನಮ್ಮ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೊರೈಸಿರುವುದು, ಹೆಮ್ಮೆಯ ವಿಷಯವಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಬೇರಪ್ಪ ಬೆಂತೂರ ಮಾತನಾಡಿ, ‘ಮಕ್ಕಳು ಸಂಸ್ಕಾರ ಮತ್ತು ಪ್ರಾಮಾಣಿಕತೆ ರೂಢಿಸಿಕೊಳ್ಳಲು ಶಿಕ್ಷಕರು ಮತ್ತು ಪೋಷಕರು ನೆರವಾಗಬೇಕು’ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪೀರಸಾಬ ನದಾಫ ಮಾತನಾಡಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಶಿಕ್ಷಕ ಕೆ.ಬಿ.ಕೊಣ್ಣೂರು, ರವಿ ಕೋಟಿ, ಮಹೇಶ ಮುಸ್ಕಿನಭಾವಿ, ರಮೇಶ ಹಳ್ಳಿ, ಪಿ.ಎಸ್.ಗುಂಡಳ್ಳಿ, ಆರ್.ಎನ್.ಗೌಡರ, ಈರಮ್ಮ ಚಬ್ಬರಭಾವಿ, ಅಶೋಕ ಬೂದಿಹಾಳ, ರಾಮಣ್ಣ ಅಂಬಕ್ಕಿ, ಪಿ.ಎಸ್.ಅಂಗಡಿ, ಎನ್.ಕೆ.ಅಂಬಕ್ಕಿ, ಅನುರಾಧ ಕುಂಬಾರ, ಸಹನಾ ಚಕ್ರಸಾಲಿ ಇದ್ದರು.

ಮುಖ್ಯ ಶಿಕ್ಷಕ ಎಂ.ಎಸ್.ಬೇಲೇರಿ ಸ್ವಾಗತಿಸಿದರು. ಎಸ್.ಬಿ.ಮುಡಲತೋಟ ನಿರೂಪಿಸಿದರು. ಜಿ.ವೈ.ದಾಸರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.