ಗದಗ: ‘ರಾಜಕೀಯದ ಏಳುಬೀಳಿನ ಮೇಲಾಟದಲ್ಲಿ ರಾಜ್ಯದಲ್ಲಿ ಏಳೂವರೆ ವರ್ಷಗಳಷ್ಟು ದೀರ್ಘಾವಧಿಗೆ ಕೇವಲ ಇಬ್ಬರು ಪೂರ್ಣಾವಧಿ ಮುಖ್ಯಮಂತ್ರಿಗಳು ಆಡಳಿತ ನಡೆಸಲು ಅವಕಾಶ ನೀಡಿದೆ. ಅವರಲ್ಲಿ ಒಬ್ಬರು ಹಿಂದುಳಿದ ಸಮುದಾಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಡಿ.ದೇವರಾಜ ಅರಸು ಅವರಾದರೆ; ಇನ್ನೊಬ್ಬರು ಸಿಎಂ ಆಗಿ 2,792 ದಿನಗಳನ್ನು ದಾಟಿರುವ ಸಿದ್ಧರಾಮಯ್ಯ’ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ ಕೆ.ಬಿ. ಕಂಬಳಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ನಡೆಸಿದ ಹಿನ್ನಲೆಯಲ್ಲಿ ನಗರದ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದಲ್ಲಿ ಮಂಗಳವಾರ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ 1,755ನೇ ದಿನದ ಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ನೇಹ ಸಂಬಂಧ, ಪ್ರೀತಿಗೆ ಸೋಲುವ ಗುಣದವರು. ಕೆಲವರ ದೃಷ್ಟಿಯಲ್ಲಿ ಹಠಮಾರಿ, ಒರಟರಂತೆ ಕಾಣಿಸುತ್ತಾರೆ. ಆದರೆ, ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಅವರ ನಿಷ್ಕಪಟ ನುಡಿಗಳನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದಾಗಿ ಅವರ ಎಂದು ಹೇಳಿದರು.

ಪ್ರೊ. ಮಾರುತಿ ಮಡ್ಡಿ ಮಾತನಾಡಿ, ‘ಸಿದ್ದರಾಮಯ್ಯ ಯಾವ ಗಾಡಫಾದರ್ಗಳು ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ರಾಜಕೀಯದಲ್ಲಿ ಬೆಳೆದು ಬಂದ ರೀತಿ ಅತ್ಯಂತ ರೋಚಕವಾಗಿದೆ. 2006ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾದರು. ಬೆಂಗಳೂರು-ಬಳ್ಳಾರಿ ಪಾದಯಾತ್ರೆ ನಡೆಸಿ ಹೊಸದೊಂದು ರಾಜಕೀಯ ವಾತಾವರಣ ನಿರ್ಮಿಸಿದರು. ಅದರ ಪ್ರತಿಫಲವಾಗಿ 2013 ಮೇ 13ರಂದು ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕ ಸಚಿವ ಸಂಪುಟ ನಡೆಸಿ ಅನ್ನಭಾಗ್ಯ, ಕ್ಷೀರಭಾಗ್ಯ, ವಸತಿ ಭಾಗ್ಯದಂತಹ ಜನಪರ ಯೋಜನೆಗಳನ್ನು ಘೋಷಣೆ ಮಾಡಿದರು. ಮುಖ್ಯವಾಗಿ ಹಿಂದುಳಿದವರ, ಅಲ್ಪಸಂಖ್ಯಾತರ, ರೈತರ ಸಾಲ ಮನ್ನಾ ಮಾಡಿದರು. ರಾಜ್ಯದ 22ನೇ ಮುಖ್ಯಮಂತ್ರಿಯಾದ ನಂತರ ಪಂಚ ಗ್ಯಾರಂಟಿ ಯೋಜನೆಗಳಿಂದ ವಿಶ್ವದಾದ್ಯಂತ ಪ್ರಸಿದ್ದಿಯಾದರು. ಬಡವರ ಪರ ಯೋಚಿಸುವ ಅವರೊಬ್ಬ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಎಸ್.ಆರ್.ರೊಳ್ಳಿ, ನಿವೃತ್ತ ಶಿಕ್ಷಕ ಎಸ್.ಎಸ್.ಕರಡಿ, ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ಗೌರವಾಧ್ಯಕ್ಷ ಎಸ್.ಎಸ್.ಕಳಸಾಪೂರಶೆಟ್ರ, ಉಪಾಧ್ಯಕ್ಷ ಉಮೇಶ ಪೂಜಾರ, ಸದಸ್ಯರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಹಿರಿಯರಾದ ಗುರುಮೂರ್ತಿ ಮರಿಗುದ್ದಿ, ಸಿದ್ದರಾಮಯ್ಯ ಅಭಿಮಾನಿ ಬಳಗದ ವಿ.ವೈ.ಮಕ್ಕಣ್ಣವರ, ನಾಗಪ್ಪ ಗುಗ್ಗರಿ ಸೇರಿದಂತೆ ಹಲವರು ಇದ್ದರು.

ಸ್ನೇಹ ಬಳಗ ಮತ್ತು ಅಭಿಮಾನಿ ಸಂಘಟನೆಗಳು ಸಿದ್ಧರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತಿವೆ. ರಾಜಕೀಯವಾಗಿ ಅವರನ್ನು ಟೀಕಿಸುವ ವಿರೋಧಿಗಳು ಕೂಡ ವ್ಯಕ್ತಿಗತವಾಗಿ ಅವರನ್ನು ಗೌರವಿಸುತ್ತಾರೆ
ಕೆ.ಬಿ. ಕಂಬಳಿ ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.