ಗದಗ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರಮಿಸುತ್ತಿವೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಜನರ ದಾರಿ ತಪ್ಪಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದೆ’ ಎಂದು ಸಚಿವ ಸಿ.ಸಿ.ಪಾಟೀಲ ವ್ಯಂಗವಾಡಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್ನವರು ಕೋವಿಡ್ ಲಸಿಕೆ ಬಗ್ಗೆ ಆರಂಭದಲ್ಲಿ ಅಪಹಾಸ್ಯ ಮಾಡಿದರು. ಲಸಿಕೆಯಿಂದ ಏನೂ ಪ್ರಯೋಜನ ಇಲ್ಲ ಎಂದರು. ಆದರೆ, ಇವತ್ತು ಅವರೇ ಕದ್ದು ಮುಚ್ಚಿ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಮಂದಿ ಮಕ್ಕಳನ್ನು ಹಳ್ಳಕ್ಕೆ ತಳ್ಳಿದರು. ಲಸಿಕೆ ಹಾಕಿಸಿಕೊಳ್ಳದಂತೆ ಅಪಪ್ರಚಾರ ಮಾಡಿದರು. ಆದರೆ, ಇವರು ಮಾತ್ರ ಲಸಿಕೆ ಹಾಕಿಸಿಕೊಂಡು ಸುರಕ್ಷಿತರಾದರು. ಇದು ಕಾಂಗ್ರೆಸ್ನವರು ಮಾಡಿರುವಂತಹ ಅತ್ಯಂತ ಘನಂದಾರಿ ಕೆಲಸ’ ಎಂದು ಲೇವಡಿ ಮಾಡಿದರು.

‘ಗದಗ ಶಾಸಕ ಎಚ್.ಕೆ.ಪಾಟೀಲ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಡಿರುವ ಆರೋಪಗಳನ್ನು ಕೇಳಿ ನನಗೆ ಆಘಾತವಾಯಿತು. ಪಿಎಂ ಕೇರ್ನಿಂದ ಒದಗಿಸಿರುವ ವೆಂಟಿಲೇಟರ್ಗಳನ್ನು ಡಬ್ಬಾ ಎಂದು ಕರೆದಿದ್ದಾರೆ. ಈ ಮೂಲಕ ಅವರು ರಾಜ್ಯಕ್ಕೆ, ರಾಷ್ಟ್ರಕ್ಕೆ ಏನು ಸಂದೇಶ ನೀಡಲು ಹೊರಟಿದ್ದಾರೆ ಎಂದು ತಿಳಿಯುತ್ತಿಲ್ಲ. ವ್ಯವಸ್ಥೆಯನ್ನು ಬುಡಮೇಲು ಏನೆಲ್ಲಾ ಸಾಧ್ಯವಿದೆಯೋ ಅದನ್ನು ಶಾಸಕರು ಮಾಡುತ್ತಿದ್ದಾರೆ’ ಎಂದು ಆರೋಪ ಮಾಡಿದರು.

ಇದನ್ನೂ ಓದಿ:ಜಿಲ್ಲೆಗೆ ಶೀಘ್ರವೇ 115 ಆಮ್ಲಜನಕ ಕಾನ್ಸನ್ಟ್ರೇಟರ್ಗಳು: ಸಚಿವ ಸಿ.ಸಿ.ಪಾಟೀಲ

‘ತಿಳಿವಳಿಕೆಯುಳ್ಳ ರಾಜಕಾರಣಿ ಎಚ್.ಕೆ.ಪಾಟೀಲ ಅವರು ಸ್ವಬುದ್ಧಿಯಿಂದ ಇಂತಹ ಆರೋಪ ಮಾಡಿಲ್ಲ ಅಂತ ಅನಿಸುತ್ತದೆ. ನಂ.10 ಜನಪಥ್ ಅಥವಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಣತಿಯಂತೆ ಪತ್ರಿಕಾಗೋಷ್ಠಿ ನಡೆಸಿ, ಅವರು ಹೇಳಲು ತಿಳಿಸಿದಂತೆ ಹೇಳಿದ್ದಾರೆ’ ಎಂದು ಅವರು ಆರೋಪ ಮಾಡಿದರು.

‘50 ವೆಂಟಿಲೇಟರ್ಗಳಲ್ಲಿ ಕೆಲವಕ್ಕೆ ಅಗತ್ಯ ಪರಿಕರಗಳು ಬಂದಿಲ್ಲ. ಹಾಗಾಗಿ, ಅವುಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ಚರ್ಚಿಸಿ, ಸಲಹೆ ಸೂಚನೆ ನೀಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಆದರೆ, ಕೋವಿಡ್ ನಿರ್ವಹಣೆ ವ್ಯವಸ್ಥೆಯನ್ನು ಹದಗೆಡಿಸುವ ಪ್ರಯತ್ನ ಮಾಡಿದ್ದಾರೆ. ಕೋವಿಡ್ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಳಮಟ್ಟದ ರಾಜಕಾರಣ ಮಾಡಬಾರದು. ಅದಕ್ಕೆ ಇದು ಸಮಯವಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿರುವ ಸಂದರ್ಭ ಇದು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.