ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘3 ಸಾವಿರ ಎಲ್‌ಪಿಎಂ ಸಾಮರ್ಥ್ಯದ ಘಟಕ ಸ್ಥಾಪಿಸಿ’

Last Updated 9 ಮೇ 2021, 4:29 IST
ಅಕ್ಷರ ಗಾತ್ರ

ಗದಗ: ಕೋವಿಡ್‌ ಎರಡನೇ ಅಲೆ ವ್ಯಾಪಾಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜಿಮ್ಸ್‌ ಆಸ್ಪತ್ರೆಗೆ ಕೇವಲ 500 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕ ಮಂಜೂರು ಮಾಡಿರುವುದು ಯಾವುದಕ್ಕೂ ಉಪಯೋಗವಿಲ್ಲ. ಆದಕಾರಣ, ಕನಿಷ್ಠ 3,000 ಎಲ್‌ಪಿಎಂ ಸಾಮರ್ಥ್ಯದ ಘಟಕ ಸ್ಥಾಪಿಸಲು ಆದೇಶಿಸಬೇಕು ಎಂದು ಆಗ್ರಹಿಸಿ ಶಾಸಕ ಎಚ್‌.ಕೆ.ಪಾಟೀಲ ಅವರುಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಗದಗ ಜಿಲ್ಲಾ ಆಸ್ಪತ್ರೆ 400+400 ಹಾಸಿಗೆ ಆಸ್ಪತ್ರೆ ಆಗಲಿದೆ. ಅದರ ಜೊತೆಗೆ ಆಯುಷ್ ಆಸ್ಪತ್ರೆ ಜಿಮ್ಸ್‌ ಆವರಣದಲ್ಲೇ ಇರುವುದರಿಂದ ಈ ಸಣ್ಣ ಘಟಕ ಇಷ್ಟು ದೊಡ್ಡ ಪ್ರಮಾಣದ ಹಾಸಿಗೆಗಳ ಅವಶ್ಯಕತೆಯನ್ನು ಪೂರೈಸಲಾರದು. ಆದ್ದರಿಂದ 3000 ಎಲ್‌ಪಿಎಂ ಸಾಮರ್ಥ್ಯದ ಘಟಕ ಸ್ಥಾಪಿಸಲು ಕೋರುತ್ತೇನೆ. 500 ಎಲ್‌ಪಿಎಂ ಸಾಮರ್ಥ್ಯದ ಘಟಕ ಕೇವಲ ಹೆಸರಿಗೆ ಮಾತ್ರ ಸ್ಥಾಪನೆಯಾದಂತೆ ಆಗುತ್ತದೆಯೇ ಹೊರತು ಗದಗ ಆಸ್ಪತ್ರೆಯ ಅವಶ್ಯಕತೆಗಳನ್ನು ಪೂರೈಸಲಾರದು. ಹೀಗೆ ಹೆಸರಿಗೆ ಮಾತ್ರ ಘಟಕ ಹಾಕಿದರೇನು ಪ್ರಯೋಜನ’ ಎಂದು ಅವರು ಪತ್ರದಲ್ಲಿ ಕಿಡಿಕಾರಿದ್ದಾರೆ.

ಈಗ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಘಟಕವು ಒಂದು ತಾಸಿಗೆ 4.5 ಜಂಬೋ ಸಿಲೆಂಡರ್ ಮಾತ್ರ ಭರ್ತಿ ಮಾಡುತ್ತದೆ. ಅಂದರೆ ಒಂದು ದಿನಕ್ಕೆ 60-70 ಸಿಲೆಂಡರ್ ಮಾತ್ರ. ಕೋವಿಡ್‌ನಂತಹ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ವೇಳೆಯಲ್ಲಿ ಇದು ಏನೇನೂ ಸಾಲದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT