ಲಕ್ಷ್ಮೇಶ್ವರ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶನಿವಾರ ಮತ್ತು ಭಾನುವಾರ ವಾರಾಂತ್ಯದ ಕರ್ಫ್ಯೂ ಘೋಷಿಸಿದರೂ ಶಿಗ್ಲಿಯಲ್ಲಿ ವಾರದ ಸಂತೆ ನಡೆಯಿತು. ಸಂತೆಯನ್ನು ಸರ್ಕಾರಿ ಆಸ್ಪತ್ರೆಯ ಮುಂಭಾಗದ ಬಯಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಸಂತೆಗೆ ಬಂದವರಾಗಲಿ ಅಥವಾ ವ್ಯಾಪಾರಸ್ಥರಾಗಲಿ ಮಾಸ್ಕ್ ಹಾಕಿರಲಿಲ್ಲ.

ಸರ್ಕಾರ ಮೊದಲೇ ಸಾಕಷ್ಟು ಎಚ್ಚರಿಕೆ ನೀಡಿದ್ದರಿಂದ ಶನಿವಾರ ಬಹಳಷ್ಟು ಜನ ಮನೆಯಿಂದ ಹೊರಗೆ ಬರಲಿಲ್ಲ. ಹೀಗಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಬಜಾರ ರಸ್ತೆ ಬಿಕೋ ಎನ್ನುತ್ತಿತ್ತು. ಅದರಂತೆ ಪ್ರಯಾಣಿಕರ ಕೊರತೆಯಿಂದಾಗಿ ಬಹಳಷ್ಟು ಬಸ್ಗಳು ಸಂಚರಿಸಲಿಲ್ಲ. 20 ಪ್ರಯಾಣಿಕರಿದ್ದರೆ ಮಾತ್ರ ಆಯಾ ಊರುಗಳಿಗೆ ಬಸ್ ಓಡಿಸುವುದಾಗಿ ಸಾರಿಗೆ ಘಟಕದ ಅಧಿಕಾರಿಗಳು ನಿರ್ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.