ನರೇಗಲ್ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ
ಹೊಳೆ ನೀರಿನಲ್ಲಿ ಬರುತ್ತಿರುವ ಗೊಡಗು ಜೊಂಡು ಹುಳಗಳ ಆರೋಪದ ಬಗ್ಗೆ ಪರೀಕ್ಷಿಸಲಾಗುವುದು. ಸದ್ಯ ಮೀಟರ್ ಅವಳವಡಿಸುವ ಕಾರ್ಯ ಎಲ್ಲೆಡೆ ನಡೆದಿದೆ. ಹಾಗಾಗಿ 2-3 ದಿನಕ್ಕೆ ನೀರು ಬಿಡುತ್ತೇವೆ.
-–ಮಹೇಶ ಬಿ. ನಿಡಶೇಶಿ, ಮುಖ್ಯಾಧಿಕಾರಿ ನರೇಗಲ್ ಪಟ್ಟಣ ಪಂಚಾಯಿತಿ
ಕ್ಲೋರಿನೇಷನ್ ಹಾಗೂ ಬ್ಲೀಚಿಂಗ್ ಪೌಡರ್ ಹಾಕಿದ್ದೇವೆ. ಕುಡಿಯುವ ಶುದ್ಧ ನೀರನ್ನು 12 ವಾರ್ಡ್‌ಗಳಿಗೆ ನಾಲ್ಕು ದಿನಗಳಿಗೊಮ್ಮೆ ಹಾಗೂ 5 ವಾರ್ಡ್‌ಗಳಿಗೆ (ಮಜರೆ ಹಳ್ಳಿಗಳಿಗೆ) ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದೇವೆ
-ಶಂಕ್ರಪ್ಪ ದೊಡ್ಡಣ್ಣವರ, ನೀರು ಪೂರೈಕೆ ವಿಭಾಗದ ಸಿಬ್ಬಂದಿ
ಏಳನೇ ವಾರ್ಡ್‌ನ ಭಾಗ್ಯ ನಗರದಲ್ಲಿ ಯಾವಾಗಲೂ ಗೊಡಗು ಹಾಗೂ ಹುಳುಗಳಿಂದ ತುಂಬಿದ ನೀರು ಪೂರೈಕೆಯಾಗುತ್ತದೆ. ಸೋಮವಾರ ಬಂದ ನೀರು ಹೀಗೆ ಇತ್ತು; ಅದನ್ನೇ ಸೋಸಿ ಕುಡಿದಿದ್ದೇವೆ
–ಬಸಮ್ಮ ಗೊರೆಬಾಳ ಲಕ್ಷ್ಮೀ ತಳಗೇಡಿ, ಭಾಗ್ಯ ನಗರ ನಿವಾಸಿಗಳು