ರೋಣ: ತಾಲ್ಲೂಕಿನ ಸಂದಿಗವಾಡ ಮಲ್ಲಾಪುರ ರಸ್ತೆ ಮಧ್ಯೆ ಬೈಕಿಗೆ ಟಾಟಾ ಎಸಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತ ವ್ಯಕ್ತಿ ಬೆಳವಣಕಿ ಗ್ರಾಮದ ನಿವಾಸಿ ಬಸವರಾಜ ಚನ್ನಬಸಪ್ಪ ಕುಸುಗಲ್ (39) ಎಂದು ಗುರುತಿಸಲಾಗಿದೆ.
ಸಂದಿಗವಾಡ ಹಾಗೂ ಮಲ್ಲಾಪುರ ರಸ್ತೆ ಮಧ್ಯವಿರುವ ಶ್ರೀಸಾಯಿ ದಾಬಾದ ಹತ್ತಿರ ಬೆಳವಣಕಿಯಿಂದ ರೋಣಕ್ಕೆ ಬರುತ್ತಿರುವ ಬೈಕ್ ಹಾಗೂ ರೋಣದ ಕಡೆಯಿಂದ ಬೆಳವಣಕಿಯ ಕಡೆಗೆ ಹೋಗುತ್ತಿರುವ ಟಾಟಾ ಎಸಿ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮೃತ ದೇಹವನ್ನು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ ಎಂದು ಪಿಎಸ್‌ಐ ಎಲ್.ಕೆ.ಜೂಲಕಟ್ಟಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.