ಗದಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ ಪ್ರಕರಣದ ಹಿಂದೆ ಕೇಂದ್ರ ಸರ್ಕಾರ, ಬಿಜೆಪಿಯ ರಾಜಕೀಯ ವ್ಯವಹಾರಗಳ ಸಮಿತಿ, ಕೇಂದ್ರ ಸಚಿವರು ಹಾಗೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವ ರಾಜ್ಯದ ಕೆಲ ನಾಯಕರ ಕುತಂತ್ರ ಇದೆ’ ಎಂದು ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು.
‘ರಾಜ್ಯಪಾಲರು ನೀಡಿದ ಆದೇಶ ಸಂವಿಧಾನಬಾಹಿರವಾಗಿದ್ದು, ಅವರ ನಿರ್ಣಯದ ಹಿಂದೆ ರಾಜಕೀಯ ದುರುದ್ದೇಶವಿದೆ. ರಾಜಭವನವನ್ನು ರಾಜಕಾರಣಕ್ಕೆ ಬಳಸಿ, ಕೇಂದ್ರ ಸರ್ಕಾರದ ನಿಯಮಗಳನ್ನೂ ಗಾಳಿಗೆ ತೂರಿದ ರಾಜ್ಯಪಾಲರ ನಡೆಯನ್ನು ನಾವು ಖಂಡಿಸುತ್ತೇವೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯ ಸರ್ಕಾರದ 33 ಸಚಿವರು, 136 ಶಾಸಕರು, ಪಕ್ಷದ ಕಾರ್ಯಕರ್ತರು, ಹೈಕಮಾಂಡ್‌ನ ಬೆಂಬಲ ಹಾಗೂ ಜನರ ಆಶೀರ್ವಾದ, ಬೆಂಬಲ ಸಿದ್ದರಾಮಯ್ಯ ಅವರಿಗಿದೆ. ನಮ್ಮ ಸರ್ಕಾರವನ್ನು ದುರ್ಬಲಗೊಳಿಸಲು ಆಗದು’ ಎಂದರು.