ಗಜೇಂದ್ರಗಡ: ತಾಲ್ಲೂಕಿನ ರೈತರು ಗೋವಿನಜೋಳ ಬೆಳೆಗಳ ಬೆಳವಣಿಗೆಗೆ ಪೂರಕವಾಗಿರುವ ಯೂರಿಯಾ ಗೊಬ್ಬರ ಪಡೆಯಲು ರಸಗೊಬ್ಬರ ಅಂಗಡಿಗಳಲ್ಲಿ ಮುಗಿ ಬಿದ್ದಿದ್ದರು.

ಮಾರುಕಟ್ಟೆಯಲ್ಲಿ ಹಲವು ದಿನಗಳಿಂದ ಯೂರಿಯಾ ಸೀಗದೆ ರೈತರು ಪರದಾಡುತ್ತಿದ್ದು, ಕೆಲವು ಅಂಗಡಿಗಳಲ್ಲಿ ಯೂರಿಯಾ ಲಭ್ಯವಿದ್ದು, ರೈತರು ಹಗಲು ರಾತ್ರಿ ಅಂಗಡಿ ಮುಂದೆ ಕಾಯುವಂತಾಗಿದೆ. ಸಕಾಲದಲ್ಲಿ ಯೂರಿಯಾ ಸಿಗದ ಪರಿಣಾಮ ಬೆಳೆ ಹಾಳುಗುವ ಭೀತಿ ರೈತರನ್ನು ಆವರಿಸಿದೆ.

ಮಂಗಳವಾರ ಪಟ್ಟಣದ ಲಿಂಗರಾಜ ಟ್ರೇಡಿಂಗ್ ಕಂಪನಿ, ದೊಡ್ಡ ಬಸವೇಶ್ವರ ಅಗ್ರೋ ಕೇಂದ್ರಗಳಿಗೆ ತಲಾ 20 ಟನ್, ವಿದ್ಯಾಶ್ರೀ ಅಗ್ರೋ ಕೇಂದ್ರಕ್ಕೆ 15 ಟನ್ ಯೂರಿಯಾ ಪೂರೈಕೆಯಾಗಿದ್ದು, ಪೊಲೀಸರು ರೈತರನ್ನು ನಿಯಂತ್ರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.