ಡಂಬಳ: ರೈತರು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆ ಕಟಾವು ಮಾಡಿದ ನಂತರ ಸ್ವಚ್ಛ ಮಾಡಿ ಒಣಗಿಸಿ ಮಾರುಕಟ್ಟೆಗೆ ಕಳಿಸಬೇಕಾದರೆ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳನ್ನೇ ತಾತ್ಕಾಲಿಕವಾಗಿ ಕಣ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ರೈತರ ಹಿತದೃಷ್ಟಿಯಿಂದ ಸ್ಥಳೀಯ ಆಡಳಿತ ಗ್ರಾಮೀಣ ಪ್ರದೇಶದಲ್ಲಿ ಕಣ ನಿರ್ಮಿಸುವ ಯೋಜನೆ ರೂಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಡಂಬಳ ಹೋಬಳಿ ಭಾಗದಲ್ಲಿ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಹೆಸರು, ಕಡ್ಲಿ, ಹೈಬ್ರಿಡ್ ಮತ್ತು ಬಿಳಿ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಡಂಬಳ, ಮೇವುಂಡಿ, ಬರದೂರ, ಕದಾಂಪೂರ ಮುಂತಾದ ಗ್ರಾಮದಲ್ಲಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ಸಮೀಪವಿರುವ ರಸ್ತೆಗಳಲ್ಲಿ ಸುರಿದು ಸ್ವಚ್ಛಗೊಳಿಸುತ್ತಿದ್ದಾರೆ. ಕೂಲಿ ಕಾರ್ಮಿಕರ ಕೊರತೆ ಪರಿಣಾಮ ರೈತರು ಯಂತ್ರದ ಮೂಲಕ ಬೆಳೆ ಕಟಾವು ಮಾಡಿದ ನಂತರ ರಸ್ತೆಯ ಬದಿಯಲ್ಲಿ ತಂದು ಸುರಿದು ಸ್ವಚ್ಛಗೊಳಿಸುವುದು ಸಾಮಾನ್ಯವಾಗಿದೆ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳಲ್ಲಿ ಹಗಲು ಮತ್ತು ರಾತ್ರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್, ಲಾರಿ ಇತರೆ ವಾಹನಗಳು ಸಂಚಾರ ಮಾಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

‘ನಮ್ಮ ಗ್ರಾಮದಲ್ಲಿ ರೈತರಿಗೆ ಪ್ರತ್ಯೇಕ ಕಣವಿಲ್ಲ. ಪ್ರತಿಯೊಂದು ಗ್ರಾಮದಲ್ಲಿ ಕಣ ನಿರ್ಮಿಸಬೇಕು. ಸರ್ಕಾರ ತ್ವರಿತವಾಗಿ ಕಣ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು’ ಎಂದು ಮೇವುಂಡಿ ಗ್ರಾಮದ ರೈತ ಮುಖಂಡ ಅಂದಪ್ಪ ಹಾರೂಗೇರಿ ಒತ್ತಾಯಿಸಿದರು.

ನರೇಗಾ ಯೋಜನೆಯಡಿ ಆಸಕ್ತಿ ಇರುವ ರೈತರಿಗೆ ಸ್ಥಳೀಯವಾಗಿ ಕಣ ನಿರ್ಮಿಸಿಕೊಳ್ಳಲು ಸಹಾಯಧನ ನೀಡಬೇಕು. ವರ್ಷಪೂರ್ತಿ ಬೆಳೆ ಬೆಳೆಯಲು ಶ್ರಮಪಡುವ ರೈತರಿಗೆ ಬೆಳೆ ಕಟಾವು ಮಾಡಿದ ನಂತರ ಮಾರುಕಟ್ಟೆಗೆ ಕಳಿಸಲು ಹರಸಾಹಸ ಪಡುವ ಸ್ಥಿತಿ ಇದೆ ಎಂದು ಡಂಬಳ ಗ್ರಾಮದ ರೈತ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಬೇಸರ ವ್ಯಕ್ತಪಡಿಸಿದರು.

‘ಎಪಿಎಂಸಿ ಪ್ರಮುಖ ಮಾರುಕಟ್ಟೆ ಮತ್ತು ಉಪ ಮಾರುಕಟ್ಟೆಯಲ್ಲಿ ಮಾತ್ರ ರೈತರ ಹಿತದೃಷ್ಟಿಯಿಂದ ಬೆಳೆ ಒಣಗಿಸುವ ಕಟ್ಟಿ ನಿರ್ಮಿಸಿ ಮೂಲಸೌಲಭ್ಯಕ್ಕೆ ಆದ್ಯತೆ ನೀಡಬಹುದು. ಕಣ ನಿರ್ಮಿಸಬೇಕೆಂದು ಬಹುತೇಕ ಗ್ರಾಮದ ರೈತರಿಂದ ಬೇಡಿಕೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮೂಹಿಕ ಅಥವಾ ವೈಯಕ್ತಿಕ ಕಣ ನಿರ್ಮಾಣ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು’ ಎನ್ನುತ್ತಾರೆ ಮುಂಡರಗಿ ಎಪಿಎಂಸಿ ಕಾರ್ಯದರ್ಶಿ ಜೆ.ರಾಘವೇಂದ್ರ.

ಗ್ರಾಮಕ್ಕೊಂದು ಕಣ ನಿರ್ಮಿಸಲು ರೈತರ ಒತ್ತಾಯ ರಾಜ್ಯ ಹೆದ್ದಾರಿಗಳೆ ರೈತರಿಗೆ ತಾತ್ಕಾಲಿಕ ಕಣ ಕಣ ನಿರ್ಮಾಣಕ್ಕೆ ಯೋಜನೆ ರೂಪಿಸಲು ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.